ADVERTISEMENT

ಇಂಡೊನೇಷ್ಯಾ: ಸಮುದ್ರಕ್ಕೆ ಪತನವಾಗಿದ್ದ ವಿಮಾನದ ಬ್ಲ್ಯಾಕ್‌ಬಾಕ್ಸ್ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 8:40 IST
Last Updated 1 ನವೆಂಬರ್ 2018, 8:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತ:ಸುಮಾತ್ರ ದ್ವೀಪಸಮೂಹದ ಬಳಿ ಸಮುದ್ರಕ್ಕೆ ಪತನಗೊಂಡಿದ್ದಲಯನ್‌ ಏರ್‌ ಕಂಪನಿಗೆ ಸೇರಿದ ವಿಮಾನದಬ್ಲ್ಯಾಕ್‌ಬಾಕ್ಸ್ ಪತ್ತೆಹಚ್ಚಲಾಗಿದೆ ಎಂದು ಇಂಡೊನೇಷ್ಯಾದ ಮುಳುಗುತಜ್ಞರು ಗುರುವಾರ ಹೇಳಿದ್ದಾರೆ.

ವಿಮಾನದ ಅವಶೇಷಗಳ ಎಡೆಯಿಂದ ನಾವು ಬ್ಲ್ಯಾಕ್‌ಬಾಕ್ಸ್‌ ಪತ್ತೆಹೆಚ್ಚಿದ್ದೇವೆ ಎಂದು ಮುಳುಗುತಜ್ಞ ಹೆಂದ್ರಾ ಎಂಬುವವರು ಹೇಳಿದ್ದನ್ನು ಜಕಾರ್ತದ ಮೆಟ್ರೊ ಟಿವಿ ವರದಿ ಮಾಡಿದೆ.ಇದೀಗಬ್ಲ್ಯಾಕ್‌ಬಾಕ್ಸ್ ದೊರೆತಿರುವುದರಿಂದ ಅಪಘಾತದಕಾರಣ ತಿಳಿಯುವುದು ಸುಲಭವಾಗಲಿದೆ.

189 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಒಳಗೊಂಡಿದ್ದಬೋಯಿಂಗ್ 737–800 ವಿಮಾನ ಸೋಮವಾರ ಬೆಳಿಗ್ಗೆ ಪತನಗೊಂಡಿತ್ತು.ಹಾರಾಟ ಆರಂಭಿಸಿದ 13 ನಿಮಿಷಗಳ ನಂತರ ರಾಡಾರ್‌ ಸಂಪರ್ಕದಿಂದ ಕಡಿತಗೊಂಡಿದ್ದ ವಿಮಾನ, ವೇಗವಾಗಿ ಮೇಲಕ್ಕೇರಿ ದಿಢೀರನೆ ಕೆಳಕ್ಕೆ ಕುಸಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.