ADVERTISEMENT

ಚೀನಾ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್, ರೆಕಾರ್ಡರ್ ಪತ್ತೆ

ಚೀನಾ ಸರ್ಕಾರ ಮಾಹಿತಿ

ಏಜೆನ್ಸೀಸ್
Published 23 ಮಾರ್ಚ್ 2022, 13:09 IST
Last Updated 23 ಮಾರ್ಚ್ 2022, 13:09 IST
ವಿಮಾನ ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗೆ ಬುಧವಾರ ಮಳೆ ಅಡ್ಡಿಯಾಯಿತು
ವಿಮಾನ ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯಾಚರಣೆಗೆ ಬುಧವಾರ ಮಳೆ ಅಡ್ಡಿಯಾಯಿತು   

ಬೀಜಿಂಗ್:ಚೀನಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್ ಬುಧವಾರ ಪತ್ತೆಯಾಗಿದ್ದು, ಇನ್ನೊಂದು ಬ್ಲ್ಯಾಕ್‌ಬಾಕ್ಸ್‌ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ವಿಮಾನದ ಪೈಲಟ್ ಕೊಠಡಿಯ ರೆಕಾರ್ಡರ್ ಸಹ ಪತ್ತೆಯಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಚೀನಾದ ವಿಮಾನಯಾನ ಪ್ರಾಧಿಕಾರದ ವಕ್ತಾರ ಲಿಯು ಲುಸಾಂಗ್ ಅವರು ಮಾಹಿತಿ ನೀಡಿದ್ದಾರೆ. ಆದರೆ ಈ ರೆಕಾರ್ಡರ್ ಪೂರ್ತಿ ಹಾನಿಗೀಡಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಈ ವಿಮಾನದಲ್ಲಿ 132 ಮಂದಿ ಪ್ರಯಾಣಿಕರಿದ್ದರು. ಯಾವುದೇ ಪ್ರಯಾಣಿಕರು ಬದುಕುಳಿದ ಸಾಧ್ಯತೆಗಳಿಲ್ಲ ಎಂದು ವರದಿಗಳು ತಿಳಿಸಿವೆ. ಕೆಲವರ ಗುರುತಿನ ಚೀಟಿಗಳು, ವಿಮಾನದ ಕೆಲವು ಅವಶೇಷಗಳು ಬಿಟ್ಟರೆ ಯಾರೊಬ್ಬರ ಮೃತದೇಹವೂ ಸಿಕ್ಕಿಲ್ಲ.

ಈ ಮಧ್ಯೆ, ವಿಮಾನದ ಅವಶೇಷಗಳ ಶೋಧಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.