ಕಂದಹಾರ್: ‘ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್‌ನ ಇಮಾಮ್ ಬರ್ಗಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 37 ಜನರು ಸಾವನ್ನಪ್ಪಿದ್ದು, 74ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’ ಎಂದು ತಾಲಿಬಾನ್ ಅಧಿಕಾರಿಗಳುಹೇಳಿದ್ದಾರೆ.
ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸತತ ಎರಡನೇ ಶುಕ್ರವಾರವೂ ನಡೆದ ದಾಳಿ ಇದಾಗಿದೆ. ‘ಮಸೀದಿಯೊಳಗೆ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಸ್ಥಳೀಯ ತಾಲಿಬಾನ್ ಅಧಿಕಾರಿಯೊಬ್ಬರು ಮಾಹಿತಿನೀಡಿದ್ದಾರೆ.
ಸ್ಫೋಟದ ಹೊಣೆಯನ್ನು ಇದುವರೆಗೆ ಯಾವ ಉಗ್ರ ಸಂಘಟನೆಯು ಒಪ್ಪಿಕೊಂಡಿಲ್ಲ. ಅ. 8ರಂದು ಕುಂಡುಜ್ ಪ್ರಾಂತ್ಯದ ಶಿಯಾ ಮಸೀದಿಯಲ್ಲಿ ಇಸ್ಲಾಮಿಕ್ ಸ್ಟೇಟ್-ಖೊರಾಸನ್ (ಐಎಸ್-ಕೆ) ನಡೆಸಿದ ಸ್ಫೋಟದ ಮಾದರಿಯಲ್ಲೇ ಈ ದಾಳಿಯನ್ನು ನಡೆಸಲಾಗಿದೆಎನ್ನಲಾಗಿದೆ.
ಇವನ್ನೂ ಓದಿ
*ಅಫ್ಗಾನಿಸ್ತಾನ: ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, ಸಾವಿನ ಸಂಖ್ಯೆ 100ಕ್ಕೆ
*ಅಫ್ಗಾನಿಸ್ತಾನದ ಮಸೀದಿ ಮೇಲಿನ ಆತ್ಮಾಹುತಿ ಬಾಂಬರ್ ದಾಳಿ 'ದೊಡ್ಡ ದುರಂತ': ಅಮೆರಿಕ
*ಕಾಬೂಲ್ ಹೋಟೆಲ್ಗಳಲ್ಲಿ ಉಳಿಯದಂತೆ ಪ್ರಜೆಗಳಿಗೆ ಬ್ರಿಟನ್, ಅಮೆರಿಕ ಎಚ್ಚರಿಕೆ
*ಅಫ್ಗಾನಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ: ತಾಲಿಬಾನ್ ಕಮಾಂಡರ್ ಸಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.