ADVERTISEMENT

ದುಬೈ ಬಂದರಿನ ಹಡಗಿನಲ್ಲಿ ಸ್ಫೋಟ; ಯಾವುದೇ ಪ್ರಾಣ ಹಾನಿ ಇಲ್ಲ

ಏಜೆನ್ಸೀಸ್
Published 8 ಜುಲೈ 2021, 4:26 IST
Last Updated 8 ಜುಲೈ 2021, 4:26 IST
ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ (ರಾಯಿಟರ್ಸ್ ಚಿತ್ರ)
ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ (ರಾಯಿಟರ್ಸ್ ಚಿತ್ರ)   

ದುಬೈ: ದುಬೈನ ಮುಖ್ಯ ಬಂದರಿನ ಸರಕು ಸಾಗಣೆ ಹಡಗಿನಲ್ಲಿ ಸ್ಫೋಟ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಎಮಿರೇಟ್ಸ್‌‌ನ ಮಾಧ್ಯಮ ಕಚೇರಿ ತಿಳಿಸಿದೆ.

ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಸ್ಫೋಟದ ತೀವ್ರತೆಗೆ ಸಮೀಪದ ಮೂರು ಮನೆಗಳಲ್ಲಿ ಕಿಟಕಿ, ಬಾಗಿಲುಗಳು ಅಲುಗಾಡಿದ್ದವು. ಬಳಿಕ ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿಸಿದೆ.

ಘಟನೆ ಹಿಂದಿನ ಕಾರಣಗಳು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಜೆಬೆಲ್ ಅಲಿ ಬಂದರಲಿನಲ್ಲಿ ಹಡಗಿನಲ್ಲಿದ್ದ ಕಂಟೇನರ್‌ನೊಳಗೆ ಸ್ಫೋಟ ಉಂಟಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ದುಬೈ ಮಾಧ್ಯಮ ಕಚೇರಿಯು ತಿಳಿಸಿದೆ.

ಇಲ್ಲಿನ ಬಂದರು ವಿಮಾನವಾಹಕ ನೌಕೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಜನತ್ತಿನ ಅತಿ ನಿಬಿಡ ಬಂದರುಗಳಲ್ಲಿ ಒಂದಾಗಿದೆ.

ಬಂದರಿನಲ್ಲಿ ಸರಕು ಸಾಗಣೆ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ಮರಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

'ನಾನು ನನ್ನ ಮನೆಯ ಬಾಲ್ಕನಿಯಲ್ಲಿದ್ದೆ. ಸೂರ್ಯನ ಬೆಳಕಿನಂತೆ ಹಳದಿ ಬಣ್ಣವು ಸ್ನೇಹಿತನ ಗಮನಕ್ಕೆ ಬಂತು. ಇದಾದ ಬಳಿಕ ಶಬ್ದ ಕೇಳಿಸಿತ್ತು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಮಗದೊಬ್ಬರ ಹೇಳಿಕೆ ಪ್ರಕಾರ ಸ್ಫೋಟದ ತೀವ್ರತೆಗೆ ಕಿಟಕಿಗಳು ಅಲುಗಾಡಿದ್ದವು. 'ಕಳೆದ 15 ವರ್ಷಗಳಿಂದ ನಾನಿಲ್ಲಿ ವಾಸಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಇಂತಹ ಅನುಭವಾಗಿದೆ' ಎಂದಿದ್ದಾರೆ.

ಮಧ್ಯ ಪ್ರಾಚ್ಯದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿರುವ ಜೆಬೆಲ್ ಅಲಿ ಮುಕ್ತ ವಲಯದಲ್ಲಿ (ಜೆಎಎಫ್‌ಝಡ್‌ಎ) 8,000ದಷ್ಟು ಕಂಪನಿಗಳು ಸ್ಥಿತಗೊಂಡಿದ್ದು, ಕಳೆದ ವರ್ಷ ದುಬೈನ ದೇಶೀಯ ಉತ್ಪನ್ನದ ಶೇಕಡಾ 23ರಷ್ಟು ಉತ್ಪಾದಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.