ADVERTISEMENT

ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ರಿಂದ ಬಾಹ್ಯಾಕಾಶ ಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 17:49 IST
Last Updated 20 ಜುಲೈ 2021, 17:49 IST
ಉದ್ಯಮಿ ಜೆಫ್ ಬೆಜೊಸ್‌ ಅವರು ಸಹ ಪ್ರಯಾಣಕಿ ವ್ಯಾಲೆ ಫಂಕ್ ಅವರ ಜೊತೆ ವಿಮಾನದ ಬಳಿ ಇರುವುದು
ಉದ್ಯಮಿ ಜೆಫ್ ಬೆಜೊಸ್‌ ಅವರು ಸಹ ಪ್ರಯಾಣಕಿ ವ್ಯಾಲೆ ಫಂಕ್ ಅವರ ಜೊತೆ ವಿಮಾನದ ಬಳಿ ಇರುವುದು   

ವ್ಯಾನ್ ಹಾರ್ನ್‌, ಅಮೆರಿಕ: ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್‌ ಬೆಜೊಸ್‌ ಮಂಗಳವಾರ ತಮ್ಮದೇ ಕಂಪನಿಯ ‘ಬ್ಲೂ ಹೊರಿಜಿನ್’ ಗಗನನೌಕೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಬಾಹ್ಯಾಕಾಶ ಪ್ರಯಾಣ ಕೈಗೊಂಡರು. ಈ ಮೂಲಕ ಅಂತರಿಕ್ಷಕ್ಕೆ ಪ್ರಯಾಣಿಸಿದ ಎರಡನೇ ಬಿಲಿಯನೇರ್‌ ಎಂಬ ಹಿರಿಮೆಗೆ ಅವರು ಪಾತ್ರರಾದರು.

ಬೆಜೊಸ್‌ ಅವರ ಜೊತೆಗೆ ಸಹೋದರ ಮ್ಯಾಕ್‌, ನೆದರ್‌ಲೆಂಡ್ಸ್‌ನ 18 ವರ್ಷದ ಯುವಕ, ಟೆಕ್ಸಾಸ್‌ನ 82 ವರ್ಷದ ವ್ಯಕ್ತಿಯು ಸೇರಿದಂತೆ ಆಯ್ದ ಪ್ರಯಾಣಿಕರು ಪ್ರಯಾಣಿಸಿದರು.

ಅಪೊಲೊ 11 ಚಂದ್ರಯಾನದ 52ನೇ ವರ್ಷಾಚರಣೆಯ ದಿನವೂ ಇದಾಗಿದ್ದು, ಚಾರಿತ್ರಿಕ ಮಹತ್ವದ ಕಾರಣಕ್ಕಾಗಿ ಬೆಜೊಸ್ ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.