ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಅವರನ್ನು ಭೇಟಿಯಾಗಿದ್ದಾರೆ. ಇಸ್ರೇಲ್ ಖಂಡಿತವಾಗಿಯೂ ಯುದ್ಧದಲ್ಲಿ ಜಯ ಸಾಧಿಸಲಿದೆ, ಭಯೋತ್ಪಾದಕತೆಯ ವಿರುದ್ಧ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ –ಹಮಾಸ್ ಘರ್ಷಣೆಯ ಬಗ್ಗೆ ಇಸ್ರೇಲ್ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ..
ಕಂಗನಾ ಸದ್ಯ ಮುಂಬರುವ ‘ತೇಜಸ್’ ಸಿನಿಮಾ ಪ್ರಚಾರದಲ್ಲಿದ್ದಾರೆ.
‘ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿಯ ಭೇಟಿ ಉತ್ತಮವಾಗಿತ್ತು, ಇಂದು ಇಡೀ ಜಗತ್ತು, ವಿಶೇಷವಾಗಿ ಇಸ್ರೇಲ್ ಭಯೋತ್ಪಾದಕತೆ ವಿರುದ್ಧ ಹೋರಾಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ರಾವಣ ಪ್ರತಿಮೆ ದಹನ
ಕಂಗನಾ ಅವರು ನಿನ್ನೆ (ಮಂಗಳವಾರ) ದೆಹಲಿಯಲ್ಲಿ ವಿಜಯ ದಶಮಿಯ ಅಂಗವಾಗಿ ರಾವಣ ಪ್ರತಿಮೆಯನ್ನು ದಹನ ಮಾಡಿದ್ದಾರೆ. ಈ ಬಗ್ಗೆ ಹೇಳಿದ ಅವರು, ‘ಇಂದಿನ ಕಾಲದ ಆಧುನಿಕ ರಾವಣನನ್ನು ಮತ್ತು ಹಮಾಸ್‌ನಂತಹ ಉಗ್ರರನ್ನು ಸದೆಬಡಿಯುತ್ತಿರುವ ಜನರನ್ನು ಭೇಟಿಯಾಗಬೇಕು ಎನ್ನಿಸಿತು, ಅದಕ್ಕಾಗಿ ಇಸ್ರೇಲ್ ರಾಯಭಾರಿಯನ್ನು ಭೇಟಿಯಾದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿ, ಗಾಜಾ ಪಟ್ಟಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು, ಅಂದಿನಿಂದ ಶುರುವಾದ ಯುದ್ಧ ಇವತ್ತಿಗೂ ನಡೆಯುತ್ತಿದೆ. ಈ ಸಂಘರ್ಷದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರ್ಗತಿಕರಾಗಿ ಜೀವನ ಸಾಗಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.