ನ್ಯೂಯಾರ್ಕ್: ದೂರವಾಣಿ ಕರೆ ಮೂಲಕ ಬಾಂಬ್ ಬೆದರಿಕೆ ಕರೆಬಂದ ತಕ್ಷಣ ನ್ಯೂಯಾರ್ಕ್‌ನ ಸಿಎನ್‌ಎನ್ ಕಚೇರಿಯಲ್ಲಿ ನಡೆಯುತ್ತಿದ್ದ ನೇರ ಪ್ರಸಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅಲ್ಲಿದ್ದವರನ್ನು ಹೊರಕಳುಹಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
‘ಕಟ್ಟಡದ ಐದು ಉಪಕರಣಗಳಲ್ಲಿ ಬಾಂಬ್ ಇಡಲಾಗಿದೆ ಎಂದು ರಾತ್ರಿ 10.07 ನಿಮಿಷದ ವೇಳೆ ಬೆದರಿಕೆ ಹಾಕಲಾಗಿತ್ತು’ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣನೇ ನ್ಯೂಸ್‌ರೂಂನ ಎಚ್ಚರಿಕೆಗ ಗಂಟೆ ಮೊಳಗಲಾರಂಭಿಸಿತು, ತಕ್ಷಣವೇ ಕಟ್ಟಡದಲ್ಲಿ ಇದ್ದ ಎಲ್ಲ ಸಿಬ್ಬಂದಿ ಹೊರಗೆ ತೆರಳಿದರು. ಸುಮಾರು ಅರ್ಧಗಂಟೆಗಳ ಕಾಲ ನೇರಪ್ರಸಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಕಚೇರಿ ಸಮೀಪದಲ್ಲಿದ್ದ ಎಲ್ಲ ಅಂಗಡಿಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
‘ಕಟ್ಟಡದ ಒಳಪ್ರವೇಶಿಸಿದ ಪೊಲೀಸರು, ಮೂಲೆಮೂಲೆಯಲ್ಲಿ ಹುಡುಕಾಟ ನಡೆಸಿದರು. ರಾತ್ರಿ 11.53ರ ತನಕವೂ ಶೋಧ ಕಾರ್ಯ ಮುಂದುವರೆಯಿತು. ಆದರೆ ಯಾವುದೇ ಸ್ಫೋಟಕ ಪತ್ತೆಯಾಗದ ಕಾರಣ ಚಟುವಟಿಕೆ ಎಂದಿನಂತೆ ಮುಂದುವರಿಯಿತು’ ಎಂದು ಸಿಎನ್‌ಎನ್ ಟ್ವಿಟರ್ ಖಾತೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.