ಲೂಸಿಯಾನ, ಅಮೆರಿಕ (ಎಪಿ): ಅಮೆರಿಕದ ಟೆಕ್ಸಾಸ್ ರಾಜ್ಯದ ರೂಪದರ್ಶಿ, ಮಿಸ್ ಯುಎಸ್‌ಎ ಆರ್’ಬೋನ್ನಿ ಗೇಬ್ರಿಯಲ್ ಅವರು ಶನಿವಾರ ‘ಭುವನ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಲೂಸಿಯಾನದ ನ್ಯೂ ಆರ್ಲೀನ್ಸ್‌ನಲ್ಲಿ ಭುವನ ಸುಂದರಿ ಸ್ಪರ್ಧೆಯ 71ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಆರ್’ಬೋನ್ನಿ ಅವರು ಮಿಸ್ ಯುಎಸ್‌ಎ ಮತ್ತು ಭುವನ ಸುಂದರಿ ಸ್ಪರ್ಧೆಯಲ್ಲಿ ಜಯಗಳಿಸಿದ ಪ್ರಥಮ ಫಿಲಿಪಿನೊ ಅಮೆರಿಕನ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಸ್ತ್ರ ವಿನ್ಯಾಸಕಿ, ಹೊಲಿಗೆ ತರಬೇತುಗಾರ್ತಿಯಾಗಿರುವ ಇವರು ನಾರ್ಥ್ ಟೆಕ್ಸಾಸ್ ವಿ.ವಿಯಿಂದ ಪದವಿ ಪಡೆದಿದ್ದಾರೆ.
ಮಿಸ್ ವೆನೆಜುವೆಲಾ ಅಮಂಡಾ ಡುಡಾಮೆಲ್ ಮೊದಲ ರನ್ನರ್‌ಅಪ್ ಆಗಿ ಹೊರಹೊಮ್ಮಿದರೆ, ಮಿಸ್ ಡಾಮಿನಿಕ್ ರಿಪಬ್ಲಿಕ್ ಆ್ಯಂಡ್ರೀನಾ ಮಾರ್ಟಿನೆಝ್ ಎರಡನೇ ರನ್ನರ್‌ಅಪ್ ಆಗಿ ಆಯ್ಕೆ ಆಗಿದ್ದಾರೆ.
ಕೆಳದ ವರ್ಷ ಭಾರತದ ಹರ್ನಾಜ್ ಸಂಧು ಅವರು ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.