ADVERTISEMENT

ಇರಾನ್ ಡ್ರೋನ್ ದಾಳಿ: ಜೆರುಸೆಲೇಂ ಸುತ್ತಮುತ್ತ ಸೈರನ್ ಸದ್ದು

ಏಜೆನ್ಸೀಸ್
Published 14 ಏಪ್ರಿಲ್ 2024, 3:02 IST
Last Updated 14 ಏಪ್ರಿಲ್ 2024, 3:02 IST
<div class="paragraphs"><p>ಡ್ರೋನ್ ದಾಳಿ</p></div>

ಡ್ರೋನ್ ದಾಳಿ

   

ರಾಯಿಟರ್ಸ್‌

ಜೆರುಸೆಲೇಂ: ಇಸ್ರೇಲ್‌ ಮೇಲೆ ಶನಿವಾರ ತಡರಾತ್ರಿ ಇರಾನ್ ಭಾರಿ ಪ್ರಮಾಣದ ಡ್ರೋನ್ ದಾಳಿ ನಡೆಸಿದ್ದು, ಭಾನುವಾರ ಮುಂಜಾನೆ ಜೆರುಸೆಲೇಂ ಸುತ್ತಮುತ್ತ ಸೈರನ್‌ಗಳ ಸದ್ದು ಕೇಳಿಬರುತ್ತಿದೆ ಎಂದು ವರದಿಯಾಗಿದೆ.

ADVERTISEMENT

ಸಿರಿಯಾದ ಡಮಾಸ್ಕಸ್‌ನಲ್ಲಿ ಇರಾನ್ ಕಚೇರಿಯ ಮೇಲಿನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ.

ಇರಾನ್‌ನಿಂದ ಡ್ರೋನ್ ದಾಳಿ ನಡೆದಿರುವ ಮುನ್ಸೂಚನೆ ಸಿಕ್ಕಿದೆ. ಆದರೆ ಅದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.

‘ದಿ ಆ್ಯರೋ, ಡೇವಿಡ್ಸ್‌ ಸ್ಲಿಂಗ್, ಪೆಟ್ರಿಯಾಟ್‌, ಐರನ್ ಡೋಮ್‌, ಐರನ್‌ ಬೀಮ್‌ ನಂತಹ ಅತ್ಯಾಧುನಿಕ ಯುದ್ಧ ತಂತ್ರಜ್ಞಾನಗಳನ್ನು ಇಸ್ರೇಲ್ ಹೊಂದಿದ್ದು, ಎಲ್ಲ ರೀತಿಯಲ್ಲೂ ದಾಳಿಯನ್ನು ಎದುರಿಸಲಿದ್ದೇವೆ’ ಎಂದು ಅದು ಹೇಳಿದೆ.

ಇರಾನ್ ದಾಳಿ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.