ADVERTISEMENT

ಚೀನಾದ ಬಿಆರ್‌ಐ ಯೋಜನೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ ಬ್ರೆಜಿಲ್‌

ಪಿಟಿಐ
Published 29 ಅಕ್ಟೋಬರ್ 2024, 6:00 IST
Last Updated 29 ಅಕ್ಟೋಬರ್ 2024, 6:00 IST
<div class="paragraphs"><p>ಚೀನಾ&nbsp;</p></div>

ಚೀನಾ 

   

ಬೀಜಿಂಗ್‌: ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್’ (ಬಿಆರ್‌ಐ) ಯೋಜನೆ ಒಪ್ಪಂದಕ್ಕೆ ಬ್ರೆಜಿಲ್‌ ವಿರೋಧ ವ್ಯಕ್ತಪಡಿಸಿದೆ. 

ಈ ಹಿಂದೆ ಬ್ರಿಕ್ಸ್‌ ಒಕ್ಕೂಟದಲ್ಲಿರುವ ಭಾರತ ಈ ಯೊಜನೆಗೆ ಕೈಜೋಡಿಸಲು ಹಿಂದೇಟು ಹಾಕಿತ್ತು. ಇದೀಗ ಬ್ರೆಜಿಲ್‌ ಕೂಡ ವಿರೋಧ ವ್ಯಕ್ತಪಡಿಸಿದ್ದು ಚೀನಾಕ್ಕೆ ಭಾರಿ ಹಿನ್ನಡೆಯಾಗಿದೆ. 

ADVERTISEMENT

‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್‌ಗೆ ಬ್ರೆಜಿಲ್‌ ಕೈಜೋಡಿಸುತ್ತಿಲ್ಲ, ಬದಲಿಗೆ ಚೀನಾದ ಹೂಡಿಕೆದಾರರೊಂದಿಗೆ ಸಹಕರಿಸಲು ಬ್ರೆಜಿಲ್‌ ಪರ್ಯಾಯ ಮಾರ್ಗಗಳನ್ನು ಹುಡುಕಲಿದೆ’ ಎಂದು ಬ್ರೆಜಿಲ್‌ ಅಧ್ಯಕ್ಷ ಲುಲಾ ಡ ಸಿಲ್ವಾ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸೆಲ್ಸೊ ಅಮೊರಿಮ್ ತಿಳಿಸಿದ್ದಾರೆ

‘ಚೀನಾದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇವೇ ವಿನಃ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಚೀನಾದ ಮೂಲಸೌಕರ್ಯ ಮತ್ತು ವ್ಯಾಪಾರ ಯೋಜನೆಗಳನ್ನು ವಿಮಾ ಪಾಲಿಸಿಗಳಂತೆ ತೆಗೆದುಕೊಳ್ಳಲು ಬ್ರೆಜಿಲ್  ಬಯಸುವುದಿಲ್ಲ’ ಎಂದು ವಿವರಿಸಿದ್ದಾರೆ.

ಚೀನಾವನ್ನು ಯೂರೋಪ್‌ ಸೇರಿದಂತೆ ಹಲವಾರು ರಾಷ್ಟ್ರಗಳನ್ನು ಸಂಪರ್ಕಿಸುವ ಯೋಜನೆಯೇ ಈ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್.

ಭಾರತವೂ ವಿರೋಧಿಸಿತ್ತು

‘ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಮುಂದಾಗಿದೆ. ಹೀಗಾಗಿ, ಮೊದಲಿನಿಂದಲೂ ಭಾರತ ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದು, ಈ ನಿಲುವಿನಲ್ಲಿ‌ ಯಾವುದೇ ಬದಲಾವಣೆ ಇಲ್ಲ’ ಎಂದು ಈ ಹಿಂದೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.