ADVERTISEMENT

ಭಾರತದಿಂದ ಕೋವಿಡ್-19 ಲಸಿಕೆ ಪಡೆದ ಬ್ರೆಜಿಲ್

ಪಿಟಿಐ
Published 23 ಜನವರಿ 2021, 2:03 IST
Last Updated 23 ಜನವರಿ 2021, 2:03 IST
ಭಾರತದಿಂದ ಬಂದಿಳಿದ ಕೋವಿಡ್-19 ಲಸಿಕೆಗಳನ್ನು ಹೊತ್ತ ವಿಮಾನಕ್ಕೆ ನೀರು ಚಿಮ್ಮುವ ಮೂಲಕ ಸ್ವಾಗತ (ರಾಯಿಟರ್ಸ್ ಚಿತ್ರ)
ಭಾರತದಿಂದ ಬಂದಿಳಿದ ಕೋವಿಡ್-19 ಲಸಿಕೆಗಳನ್ನು ಹೊತ್ತ ವಿಮಾನಕ್ಕೆ ನೀರು ಚಿಮ್ಮುವ ಮೂಲಕ ಸ್ವಾಗತ (ರಾಯಿಟರ್ಸ್ ಚಿತ್ರ)   

ರಿಯೊ ಡಿ ಜನೈರೊ: ಭಾರತದಿಂದ 20 ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಬ್ರೆಜಿಲ್ ಪಡೆದಿದೆ. ಆದರೂ ದಕ್ಷಿಣ ಅಮೆರಿಕದ ಅತಿ ದೊಡ್ಡ ರಾಷ್ಟ್ರದಲ್ಲಿ ಪೂರೈಕೆ ಕೊರತೆ ಕಾಡುತ್ತಿದ್ದು, ಈ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡಲು ಜಾಗತಿಕ ಸಮುದಾಯಕ್ಕೆ ನೆರವಾಗುವುದರ ಭಾಗವಾಗಿ ಭಾರತವು, ಬ್ರೆಜಿಲ್‌ಗೆ ಕೋವಿಡ್-19 ಲಸಿಕೆಗಳನ್ನು ರವಾನಿಸಿದೆ.

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಗಳು ಶುಕ್ರವಾರ ಸಾವೊ ಪಾಲೊ ತಲುಪಿದೆ ಎಂದು ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಬಳಿಕ ಇದನ್ನು ರಿಯೊ ಡಿ ಜನೈರೊದಲ್ಲಿರುವ ಫಿಯೋಕ್ರೂಜ್ ಸಂಸ್ಥೆಗೆ ತಲುಪಿಸಲಾಗಿದೆ. ಫಿಯೋಕ್ರೂಜ್ ಲಸಿಕೆ ತಯಾರಿಸುವ ಹಾಗೂ ವಿತರಿಸುವ ಹಕ್ಕನ್ನು ಹೊಂದಿದೆ.

ADVERTISEMENT

20 ಲಕ್ಷ ಡೋಸ್‌ಗಳು ಸಾಕಾಗಲಾರದು. 21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಆದ್ಯತೆಯ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ಪೂರೈಸಲು ಹೆಚ್ಚಿನ ಪ್ರಮಾಣದಲ್ಲಿ ಡೋಸ್‌ಗಳು ಬೇಕಾಗುತ್ತದೆಎಂದು ಬ್ರೆಜಿಲ್‌ನ ಸಾರ್ವಜನಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಕಳೆದ ವಾರವೇ ಭಾರತದಿಂದ ಕೋವಿಡ್-19 ಲಸಿಕೆಯನ್ನು ಹೊತ್ತ ವಿಮಾನವು ಬ್ರೆಜಿಲ್‌ಗೆ ತೆರಳಬೇಕಿತ್ತು. ಆದರೆ ಕಾರಣಾಂತರಗಳಿಂದಾಗಿ ವಿಳಂಬವಾದ ಕಾರಣ ಬ್ರೆಜಿಲ್ ಕೋವಿಡ್-19 ಹೋರಾಟಕ್ಕೆ ಅಲ್ಪ ಹಿನ್ನಡೆಯಾಗಿದೆ.

ಜಗತ್ತಿನಾದ್ಯಂತ ರಾಷ್ಟ್ರಗಳು, ಪ್ರಮುಖವಾಗಿಯೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು, ಜನಸಂಖ್ಯೆಗೆ ತಕ್ಕದಾಗಿ ಲಸಿಕೆಗಳನ್ನು ಪೂರೈಸಲು ಸಮಸ್ಯೆಯನ್ನು ಎದುರುತ್ತಿಸುತ್ತಿದೆ.

ಬ್ರೆಜಿಲ್‌ನಲ್ಲಿ ದೇಶೀಯವಾಗಿ ಲಸಿಕೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಫಿಯೋಕ್ರೂಜ್ ಹಾಗೂ ಬುಟಾಂಟನ್ ಹೊಂದಿಲ್ಲ. ಇದರಿಂದಾಗಿ ಇತರೆ ದೇಶಗಳನ್ನು ಅವಲಂಬಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.