ADVERTISEMENT

BRICS ಒಕ್ಕೂಟಕ್ಕೆ ಸೇರಲು ಯುಎಇ ಸೇರಿದಂತೆ 6 ರಾಷ್ಟ್ರಗಳಿಗೆ ಆಹ್ವಾನ

ರಾಯಿಟರ್ಸ್
Published 24 ಆಗಸ್ಟ್ 2023, 10:36 IST
Last Updated 24 ಆಗಸ್ಟ್ 2023, 10:36 IST
ಜೋಹಾನಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದು ಹೀಗೆ
ಜೋಹಾನಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದು ಹೀಗೆ     – ಪಿಟಿಐ ಚಿತ್ರ

ಜೊಹನಸ್‌ಬರ್ಗ್: ಬ್ರಿಕ್ಸ್ ಒಕ್ಕೂಟಕ್ಕೆ ಸೇರುವಂತೆ ಸೌದಿ ಆರೇಬಿಯಾ, ಇರಾನ್, ಇಥಿಯೋಪಿಯಾ, ಅರ್ಜೆಂಟಿನಾ ಹಾಗೂ ಸಂಯುಕ್ತ ಅರಬ್ ಸಂಸ್ಥಾನಕ್ಕೆ ನಾಯಕರು ಆಹ್ವಾನ ನೀಡಿದ್ದಾರೆ.

‘ಜಾಗತಿಕ ದಕ್ಷಿಣ’ ರಾಷ್ಟ್ರಗಳ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಜಂಟಿಯಾಗಿ ಕೆಲಸ ಮಾಡುವ ಕುರಿತು ಪರಸ್ಪರ ಚರ್ಚೆ ನಡೆದ ಬೆನ್ನಲ್ಲೇ ಈ ಪ್ರಮುಖ ರಾಷ್ಟ್ರಗಳಿಗೆ ಬ್ರಿಕ್ಸ್‌ ನಾಯಕರು ಆಹ್ವಾನ ನೀಡಿದ್ದಾರೆ.

ಇರಾನ್‌, ಸೌದಿ ಅರೇಬಿಯಾ, ಯುಎಇ ಸೇರಿದಂತೆ 23 ದೇಶಗಳು ಬ್ರಿಕ್ಸ್‌ ಸದಸ್ಯತ್ವ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿವೆ.

ADVERTISEMENT

ಸದ್ಯ ಬ್ರಿಕ್ಸ್‌ ಒಕ್ಕೂಟದಲ್ಲಿ ಬ್ರೆಜಿಲ್, ರಷ್ಯಾ, ಭಾರತ. ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳು ಇವೆ. ಹೊಸ ರಾಷ್ಟ್ರಗಳ ಸೇರ್ಪಡೆಯಿಂದಾಗಿ, ಈಗಾಗಲೇ ಸದಸ್ಯತ್ವ ಬಯಸಿ ಅರ್ಜಿ ಸಲ್ಲಿಸಿರುವ ರಾಷ್ಟ್ರಗಳನ್ನು ಒಕ್ಕೂಟಕ್ಕೆ ಸೇರಿಸುವ ದಾರಿ ಸುಗಮವಾಗಲಿದೆ.

2024ರ ಜನವರಿ 1ರ ವೇಳೆ ಹೊಸ ರಾಷ್ಟ್ರಗಳು ಒಕ್ಕೂಟಕ್ಕೆ ಸೇರ್ಪಡೆಯಾಗಲಿವೆ ಎಂದು ಬ್ರಿಕ್ಸ್ ಶೃಂಗದ ಅಧ್ಯಕ್ಷತೆ ವಹಿಸಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸಾ ಹೇಳಿದ್ದಾರೆ.

ಸದ್ಯ ಇರುವ ಈ ಐದು ರಾಷ್ಟ್ರಗಳಲ್ಲಿ ಜಗತ್ತಿನ ಶೇ 41ರಷ್ಟು ಜನಸಂಖ್ಯೆ ಇದೆ. ಶೇ 24ರಷ್ಟು ಜಾಗತಿಕ ಜಿಡಿಪಿ ಹಾಗೂ ಶೇ 16ರಷ್ಟು ಜಾಗತಿಕ ವ್ಯಾಪಾರ ಈ ರಾಷ್ಟ್ರಗಳಲ್ಲಿ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.