ADVERTISEMENT

Britain | ಭಗವದ್ಗೀತೆ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಭಾರತ ಮೂಲದ ಶಿವಾನಿ ರಾಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2024, 11:23 IST
Last Updated 11 ಜುಲೈ 2024, 11:23 IST
<div class="paragraphs"><p>ಶಿವಾನಿ ರಾಜಾ</p></div>

ಶಿವಾನಿ ರಾಜಾ

   

(ಚಿತ್ರ ಕೃಪೆ:X/@ShivaniRaja_LE)

ಲಂಡನ್: ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಶಿವಾನಿ ರಾಜಾ, ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

ADVERTISEMENT

ಶಿವಾನಿ ಅವರು ಲೀಸೆಸ್ಟರ್ ಈಸ್ಟ್ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಕಳೆದ 37 ವರ್ಷಗಳಲ್ಲಿ ಲೀಸೆಸ್ಟರ್ ಈಸ್ಟ್ ಕ್ಷೇತ್ರದಿಂದ ಆಯ್ಕೆಯಾದ ಕನ್ಸರ್ವೇಟಿವ್ ಪಕ್ಷದ ಮೊದಲ ಸಂಸದೆ ಎನಿಸಿದ್ದಾರೆ.

ಬ್ರಿಟನ್ ಸಂಸತ್ತಿನಲ್ಲಿ ಜುಲೈ 10ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.

'ಲೀಸೆಸ್ಟರ್ ಈಸ್ಟ್ ಕ್ಷೇತ್ರವನ್ನು ಪ್ರತಿನಿಧಿಸಿ ಸಂಸತ್ತಿಗೆ ಆಯ್ಕೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ' ಎಂದು ಗುಜರಾತ್ ಮೂಲದ ಉದ್ಯಮಿ ಶಿವಾನಿ ತಿಳಿಸಿದ್ದಾರೆ.

ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿತ್ತು. ಭಾರತ ಮೂಲದ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ತೀವ್ರ ಮುಖಭಂಗ ಅನುಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.