ಲಂಡನ್: ಬ್ರಿಟನ್‌ನಲ್ಲಿ ಇತ್ತೀಚಿನ ವಾರದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ತಳಿಯ 50,824 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ (ಪಿಎಚ್‌ಇ) ಸಂಸ್ಥೆ ಶುಕ್ರವಾರ ಹೇಳಿದೆ.
ಅತಿ ವೇಗವಾಗಿ ಹರಡುವ ಡೆಲ್ಟಾ ತಳಿಯು ‘ಅತಂಕಕಾರಿ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಘೋಷಣೆ ಮಾಡಿದೆ.
50,824 ಸೋಂಕು ಪ್ರಕರಣಗಳೂ ಸೇರಿದಂತೆ ಡೆಲ್ಟಾ ತಳಿಯ ಒಟ್ಟು 161,981 ಪ್ರಕರಣಗಳು ಇಂಗ್ಲೆಂಡ್‌ನಲ್ಲಿ ದೃಢಪಟ್ಟಿವೆ. ಕಳೆದ ವಾರಕ್ಕೆ ಹೋಲಿಸಿಕೊಂಡರೆ ಈ ವಾರ ಅದರ ಪ್ರಮಾಣ ಶೇ. 46% ಹೆಚ್ಚಾಗಿದೆ ಎಂದು ಪಿಎಚ್‌ಇ ಹೇಳಿದೆ.
ಕೋವಿಡ್–19ರ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಮತ್ತೊಂದು ಬಾರಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಲು ಇದು ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿ ಪತ್ತೆಯಾಗಿದೆ. ಅತಿ ವೇಗವಾಗಿ ಹರಡುವ ಸಾಮರ್ಥ್ಯ ಇರುವ ಈ ತಳಿಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಕೊರೊನಾ ವೈರಾಣು ತಳಿ ಎನಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಗುರುವಾರ ಎಚ್ಚರಿಕೆ ನೀಡಿದೆ.
ಸಾರ್ಸ್ ಕೋವ್–2 (ಕೊರೊನಾ ವೈರಸ್)ನಿಂದ ರೂಪಾಂತರಗೊಂಡು ಸೃಷ್ಟಿಯಾಗಿರುವ ಡೆಲ್ಟಾ(ಬಿ16172) ಮೊದಲಿಗೆ ಪತ್ತೆಯಾಗಿದ್ದು ಭಾರತದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.