ಲಂಡನ್: ಕಂಪ್ಯೂಟರ್ಗಳಲ್ಲಿ ಕಾಣಿಸಿಕೊಂಡ ದೋಷದ ಕಾರಣ ಬ್ರಿಟಿಷ್ ವಿಮಾನಯಾನ ಸಂಸ್ಥೆಯ ಹಲವು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಯಿತು
ಕಂಪ್ಯೂಟರ್ಗಳಲ್ಲಿ ಗುರುವಾರದಿಂದ ದೋಷ ಕಾಣಿಸಿಕೊಂಡಿದೆ. ಯುರೋಪ್ನಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ಹೀಥ್ರೂ ವಿಮಾನ ನಿಲ್ದಾಣದಿಂದ ನಿರ್ಗಮಿಸುವ/ಆಗಮಿಸುವ ಅಲ್ಪಅಂತರದ ಸುಮಾರು 42 ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು.
ಪ್ರಯಾಣಿಕರಿಗೆ ಆನ್ಲೈನ್ನಲ್ಲಿ ಟಿಕೆಟ್ ಖರೀದಿಯು ಸಾಧ್ಯವಾಗದ ಕಾರಣ ಇತರ ವಿಮಾನಗಳೂ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಹಾರಾಟ ಆರಂಭಿಸಿದವು.
‘ತಾಂತ್ರಿಕ ದೋಷ ಸರಿಪಡಿಸಲಾಗುತ್ತಿದೆ’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.