ADVERTISEMENT

ಬ್ರಿಟಿಷ್‌ ಏರ್‌ವೇಸ್‌: ಗ್ರಾಹಕರ ಮಾಹಿತಿ ಹ್ಯಾಕ್‌

ಏಜೆನ್ಸೀಸ್
Published 7 ಸೆಪ್ಟೆಂಬರ್ 2018, 13:15 IST
Last Updated 7 ಸೆಪ್ಟೆಂಬರ್ 2018, 13:15 IST
   

ಲಂಡನ್‌: ಆಗಸ್ಟ್ 21 ಮತ್ತು ಸೆಪ್ಟೆಂಬರ್ 5 ರ ವರೆಗಿನ ಅವಧಿಯಲ್ಲಿ ವಿಮಾನ ಪ್ರಯಾಣ ಬುಕಿಂಗ್‌ ಮಾಡಿರುವ ಪ್ರಯಾಣಿಕರ ವೈಯಕ್ತಿಕ ಮತ್ತು ಬ್ಯಾಂಕ್‌ ಖಾತೆಗಳ ವಿವರಗಳಿಗೆ ಕನ್ನ ಹಾಕಲಾಗಿದೆ ಎಂದು ಬ್ರಿಟಿಷ್‌ ಏರ್‌ವೇಸ್‌ ಗುರುವಾರ ತಿಳಿಸಿದೆ.

ಒಟ್ಟು 3.80 ಲಕ್ಷ ಪೇಮೆಂಟ್‌ ಕಾರ್ಡ್‌ಗಳ ಮಾಹಿತಿ ಹ್ಯಾಕ್‌ ಆಗಿದೆ.

‘ವೆಬ್‌ಸೈಟ್‌ ಮತ್ತು ಮೊಬೈಲ್‌ ಆ್ಯಪ್‌ನಲ್ಲಿದ್ದ ಗ್ರಾಹಕರ ಮಾಹಿತಿ ಕದಿಯಲಾಗಿದೆ.ಕಳುವಾದ ಮಾಹಿತಿ ಪ್ರಯಾಣ ಅಥವಾ ಪಾಸ್‌ಪೋರ್ಟ್‌ ವಿವರಗಳನ್ನು ಒಳಗೊಂಡಿಲ್ಲ’ ಎಂದು ಬ್ರಿಟಿಷ್‌ ಏರ್‌ವೇಸ್‌ ತಿಳಿಸಿದೆ.

ADVERTISEMENT

‘ಪ್ರಕರಣ ಸಂಬಂಧ ಪೊಲೀಸರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ.ಪ್ರಕರಣದ ತುರ್ತು ತನಿಖೆ ನಡೆಯುತ್ತಿದೆ. ಸದ್ಯ ಸಮಸ್ಯೆ ಬಗೆಹರಿದಿದ್ದು, ವೆಬ್‌ಸೈಟ್‌ ನಿಯಮಾನುಸರವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.