ADVERTISEMENT

ತಮಾಷೆಗೆ ವಿಮಾನ ಸ್ಫೋಟಿಸುವ ಬೆದರಿಕೆ: ಭಾರತದ ವ್ಯಕ್ತಿ ಖುಲಾಸೆ

ಪಿಟಿಐ
Published 27 ಜನವರಿ 2024, 15:51 IST
Last Updated 27 ಜನವರಿ 2024, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಲಂಡನ್: ತಾನು ತಾಲಿಬಾಲಿನ್ ಸಂಘಟನೆಯ ಸದಸ್ಯನಾಗಿದ್ದು, ವಿಮಾನವನ್ನು ಸ್ಫೋಟಿಸುವುದಾಗಿ ಸ್ನೇಹಿತರ ಬಳಿ ತಮಾಷೆಗೆ ಹೇಳಿಕೊಂಡಿದ್ದ ಆರೋಪಿಯನ್ನು ಸ್ಪೇನ್ ನ್ಯಾಯಾಲಯವು ಶುಕ್ರವಾರ ಖುಲಾಸೆಗೊಳಿಸಿದೆ. ಆರೋಪಿ ಬ್ರಿಟಿಷ್–ಭಾರತೀಯ ವ್ಯಕ್ತಿ.

ಈ ಕುರಿತು ವಿಚಾರಣೆ ನಡೆಸಿದ ಮ್ಯಾಡ್ರಿಡ್ ನ್ಯಾಯಾಧೀಶ, ಭೀತಿಯೊಡ್ಡಲು ಕಾರಣವಾಗುವ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಆದಿತ್ಯ ವರ್ಮಾ ಅವರನ್ನು ದೋಷಮುಕ್ತಗೊಳಿಸಲಾಗಿದೆ. 

ADVERTISEMENT

2022ರ ಜುಲೈನಲ್ಲಿ ಸ್ನಾಪ್‌ಚಾಟ್‌ನೊಂದಿಗೆ ತನ್ನ ಜೊತೆ ಸಮಾಲೋಚನೆ ನಡೆಸುತ್ತಿದ್ದ ಸ್ನೇಹಿತರಿಗೆ, ತಾನು ತಾಲಿಬಾನ್ ಸಂಘಟನೆಯ ಸದಸ್ಯನಾಗಿದ್ದು, ಲಂಡನ್‌ನ ಗಾಟ್ವಿಕ್‌ನಿಂದ ಸ್ಪೇನ್‌ನ ಮೆನೊರ್ಕಾಗೆ ತೆರಳುವ ವಿಮಾನವನ್ನು ಸ್ಫೋಟಿಸುವುದಾಗಿ ತಮಾಷೆಗೆ ಹೇಳಿದ್ದ. ಈ ಹಿನ್ನೆಲೆಯಲ್ಲಿ ವಿಮಾನ ಹತ್ತುವ ಮುನ್ನವೇ ಬ್ರಿಟನ್ ಭದ್ರತಾ ಸಿಬ್ಬಂದಿ, ಆರೋಪಿ ವರ್ಮಾನನ್ನು ವಶಕ್ಕೆ ಪಡೆದಿದ್ದರು. ಜೊತೆಗೆ ಈ ಮಾಹಿತಿಯನ್ನು ಸ್ಪೇನ್ ಅಧಿಕಾರಿಗಳಿಗೆ ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಆಗ 18 ವರ್ಷದನಾಗಿದ್ದ ವರ್ಮಾನನ್ನು ಸ್ನೇನ್ ಪೊಲೀಸರು ಬಂಧಿಸಿದ್ದರು. ಆ ಬಳಿಕ ಜಾಮೀನಿನ ಮೇರೆಗೆ ಆರೋಪಿ ಬಿಡುಗಡೆಯಾಗಿದ್ದ. 

‘ನಾನು ತಾಲಿಬಾನ್ ಸದಸ್ಯನಾಗಿದ್ದು, ವಿಮಾನ ಸ್ಫೋಟಿಸುತ್ತೇನೆ ಎಂದು ತಮಾಷೆಗೆ ಹೇಳಿದ್ದೆ. ಆದರೆ, ಸಾರ್ವಜನಿಕರಿಗೆ ಅಪಾಯ ಎಸಗುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ವರ್ಮಾ ಹೇಳಿರುವುದಾಗಿ ಬಿಬಿಸಿ ಸುದ್ದಿವಾಹಿನಿ ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.