ADVERTISEMENT

ಇಂಗ್ಲಿಷ್ ಕಾಲುವೆ ಈಜಿದ ಬ್ರಿಟಿಷ್ ಭಾರತೀಯ ಶಾಲಾ ವಿದ್ಯಾರ್ಥಿನಿ ಪ್ರಿಶಾ ತಾಪ್ರೆ

ಪಿಟಿಐ
Published 10 ಸೆಪ್ಟೆಂಬರ್ 2024, 15:56 IST
Last Updated 10 ಸೆಪ್ಟೆಂಬರ್ 2024, 15:56 IST
.
.   

ಲಂಡನ್: ಭಾರತ ಮತ್ತು ಬ್ರಿಟನ್‌ನಲ್ಲಿ ಮಕ್ಕಳ ಹಸಿವು ನೀಗಿಸಲು ಶ್ರಮಿಸುತ್ತಿರುವ ಸಹಾಯಾರ್ಥ ಸಂಸ್ಥೆಗೆ ದೇಣಿಗೆ ಸಂಗ್ರಹಿಸಲು, ಬ್ರಿಟಿಷ್ ಭಾರತೀಯ ಶಾಲಾ ವಿದ್ಯಾರ್ಥಿನಿಯೊಬ್ಬಳು ಇಂಗ್ಲಿಷ್ ಕಾಲುವೆಯಲ್ಲಿ ಈಜುವ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ. ಕಾಲುವೆಯಲ್ಲಿ ಈಜಿದ ಕಿರಿಯರಲ್ಲಿ ಒಬ್ಬಳಾಗಿದ್ದಾಳೆ.

ಉತ್ತರ ಲಂಡನ್‌ನ ಬುಶೆ ಮೀಡ್ಸ್ ಶಾಲೆಯ ವಿದ್ಯಾರ್ಥಿನಿ ಪ್ರಿಶಾ ತಾಪ್ರೆ 12 ವರ್ಷದವಳಿದ್ದಾಗಲೇ, ಕುಟುಂಬದಲ್ಲಿ ಇಂಗ್ಲಿಷ್ ಕಾಲುವೆಯ ಕುರಿತಂತೆ ನಡೆದ ಚರ್ಚೆಯಿಂದ ಪ್ರೇರಿತಳಾಗಿ ಈಜುವ ಸವಾಲನ್ನು ಸ್ವೀಕರಿಸಿದ್ದಳು.

ನಾಲ್ಕು ವರ್ಷ ತರಬೇತಿ ಪಡೆದ ನಂತರ ಬ್ರಿಟನ್‌ನ ಡೋವರ್ ಕರಾವಳಿಯಿಂದ ಫ್ರಾನ್ಸ್‌ನ ಕೇಪ್‌ ಗ್ರಿಸ್‌ ನೆಜ್‌ ನಡುವಿನ 34 ಕಿ.ಮೀ. ದೂರವನ್ನು 11 ಗಂಟೆ 48 ನಿಮಿಷಗಳಲ್ಲಿ ಈಜಿದ್ದಾಳೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.