ನೈರೋಬಿ: ಬುರುಂಡಿಯ ವಾಯವ್ಯ ಭಾಗದ ಸಿಬಿಟೋಕ್ ಪ್ರಾಂತ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದ ಚಿನ್ನದ ಗಣಿಯಲ್ಲಿ ನೀರು ತುಂಬಿದ್ದು, ಅದರಲ್ಲಿನ ಹೊಂಡಕ್ಕೆ ಬಿದ್ದ 13 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹೊಂಡದಲ್ಲಿ ಬಿದ್ದ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪ್ರಾಂತ್ಯದ ಜಿಲ್ಲಾ ಆಡಳಿತಾಧಿಕಾರಿ ನಿಕೋಡೆಮೆ ಡಹಾಬೋನ್ಯಿಮನ ಹೇಳಿದ್ದಾರೆ.
ಬುರುಂಡಿಯ ವಾಯವ್ಯ ಮತ್ತು ಈಶಾನ್ಯ ಭಾಗಗಳಲ್ಲಿನ ಚನ್ನದ ಗಣಿಗಳಲ್ಲಿ ಇಂತಹ ದುರಂತಗಳು ಸಾಮಾನ್ಯ ಎಂಬಂತಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗುವ ಕಾರ್ಮಿಕರು ಕತ್ತಲೆಯಲ್ಲಿ ಕೆಲಸಕ್ಕೆ ಇಳಿಯುವುದೇ ಇಂತಹ ದುರಂತಗಳಿಗೆ ಕಾರಣ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.