ADVERTISEMENT

ಜಾತಿ ಪದ್ದತಿ ನಿಷೇಧ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ

ಪಿಟಿಐ
Published 26 ಏಪ್ರಿಲ್ 2023, 5:41 IST
Last Updated 26 ಏಪ್ರಿಲ್ 2023, 5:41 IST
   

ಕ್ಯಾಲಿಫೋರ್ನಿಯಾದಲ್ಲಿ ಜಾತಿ ಪದ್ಧತಿಯನ್ನು ತೊಡೆದು ಹಾಕುವ ಮಸೂದೆ ಮಂಗಳವಾರ ಜಾರಿಯಾಗಿದ್ದು, ಜಾತಿ ಪದ್ದತಿ ನಿಷೇಧಿಸಿದ ಅಮೆರಿಕ ಮೊದಲ ರಾಜ್ಯವಾಗಿದೆ.

ಈ ಹಿಂದೆ ವಾಷಿಂಗ್ಟನ್‌ನ ಸಿಯಾಟಲ್‌ ನಗರವು ಈ ಮಸೂದೆಯನ್ನು ಜಾರಿಗೊಳಿಸಿತ್ತು. ಜಾತಿ ಪದ್ಧತಿ ನಿಷೇಧಿಸಿದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.

ಮಸೂದೆ ಜಾರಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಈಕ್ವಿಟಿ ಲ್ಯಾಬ್‌ ಸಂಘಟನೆಯ ತೇನ್ಮೋಳಿ ಸೌಂದರರಾಜನ್‌, ’ಇದು ಸುಮಾರು 15 ವರ್ಷಗಳ ಹೋರಾಟದ ಫಲವಾಗಿದೆ‘ ಎಂದು ಹೇಳಿದ್ದಾರೆ.

ADVERTISEMENT

‘ಕ್ಯಾಲಿರ್ಫೋನಿಯಾದಲ್ಲಿ ಈ ಮಸೂದೆ ಜಾರಿಗೆ ಬರುವುದು ಅವಶ್ಯಕವಾಗಿದೆ. ಏಷ್ಯನ್‌–ಅಮೆರಿಕನ್‌ ಸಮುದಾಯಗಳ ಮೇಲೆ ಜಾತಿ ತಾರತಮ್ಯ ನಡೆಯುತ್ತಲೇ ಇದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಸಂಘಟಿತರಾಗಿದ್ದೇವೆ‘ ಎಂದು ಹೇಳಿದರು.

‘ಈಕ್ವಾಲಿಟಿ ಲ್ಯಾಬ್‌ ಸಂಘಟನೆಯ ಮೂಲಕ ರಾಜ್ಯದಾದ್ಯಂತ ಹೋರಾಟ ಮಾಡಲಾಗಿತ್ತು. ಈ ಹೋರಾಟದ ಫಲವಾಗಿಯೇ ವಾಷಿಂಗ್ಟನ್‌ನ ಸಿಯಾಟಲ್‌ ನಗರದಲ್ಲಿ ಫೆಬ್ರುವರಿಯಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆ ಜಾರಿಗೆ ಬಂದಿತ್ತು. ಈಗ ಕ್ಯಾಲಿರ್ಫೋನಿಯಾದಲ್ಲಿ ಜಾರಿಗೆ ಬಂದಿದೆ‘ ಎಂದು ಹೇಳಿದರು.

ಜಾತಿ ಪದ್ಧತಿ ವಿರೋಧಿ ಮಸೂದೆ ಜಾರಿಗೆ ಏಷ್ಯನ್‌–ಅಮೆರಿಕನ್‌ ವ್ಯಾಪಾರಿಗಳು ಮತ್ತು ದೇವಸ್ಥಾನ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.

ಏಷ್ಯನ್ –ಮೇರಿಕನ್ ಹೋಟೆಲ್ ಮಾಲೀಕರ ಸಂಘದ ಮಂಡಳಿಯ ಸದಸ್ಯ ಕಲ್ಪೇಶ್ ಜೋಶಿ, ‘ಇದು ಭಾರತೀಯ ಹೋಟೆಲ್ ಮತ್ತು ಮೋಟೆಲ್ ಮಾಲೀಕರ ಮೇಲೆ ಪರಿಣಾಮ ಬೀರುತ್ತದೆ. ಈ ಮಸೂದೆಯು ಅಂಗೀಕಾರವಾದರೆ, ಸಣ್ಣ ಉದ್ಯಮಗಳ ವಿರುದ್ಧ ಕ್ಷುಲ್ಲಕ ಮೊಕದ್ದಮೆಗಳನ್ನು ಹೂಡುವ ಸಾಧ್ಯತೆಯಿದೆ. ಇದರಿಂದ ಸಣ್ಣ ವ್ಯಾಪಾರಿಗಳು ವ್ಯಾಪಾರದಿಂದ ಹೊರಗುಳಿಯುವ ಸಾಧ್ಯತೆಯಿದೆ‘ ಎಂದು ಹೇಳಿದ್ದಾರೆ.

ಮಸೂದೆ ಅಂಗೀಕಾರವಾದರೆ ಅಮೆರಿಕದ ಹಿಂದೂಪೋಬಿಯಾಕ್ಕೆ ಮತ್ತಷ್ಟು ಉತ್ತೇಜನ ಸಿಗುತ್ತದೆ ಎಂದು ಕೆಲವು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.