ADVERTISEMENT

ಕೊಹಿನೂರ್‌ ವಜ್ರ ರಹಿತ ಕಿರೀಟ ಆರಿಸಿಕೊಂಡ ಬ್ರಿಟನ್‌ ರಾಣಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 15:52 IST
Last Updated 15 ಫೆಬ್ರುವರಿ 2023, 15:52 IST
...
...   

ಲಂಡನ್‌: ಬ್ರಿಟನ್‌ ರಾಣಿ ಕ್ಯಾಮಿಲ್ಲಾ ಅವರು ತಮ್ಮ ಪತಿ ಮೂರನೇ ಕಿಂಗ್‌ ಚಾರ್ಲ್ಸ್‌ ಅವರ ಪಟ್ಟಾಭಿಷೇಕದಲ್ಲಿ ವಿಶ್ವಪ್ರಸಿದ್ದ ಭಾರತದ ಕೊಹಿನೂರ್‌ ವಜ್ರವಿರದ ಕಿರೀಟ ಧರಿಸಲಿದ್ದಾರೆ. ಚಾರ್ಲ್ಸ್‌ ಅವರು ಸೇಂಟ್ ಎಡ್ವರ್ಡ್ ಕಿರೀಟ ಧರಿಸಲಿದ್ದಾರೆ.

ಮೇ 6ರಂದು ಪಟ್ಟಾಭಿಷೇಕ ನಡೆಯಲಿದೆ. ವಸಾಹತುಶಾಹಿ ಯುಗದ, ವಿವಾದಿತ ಈ ವಜ್ರದ ಮೇಲೆ ಭಾರತ ತನ್ನ ಹಕ್ಕು ಸಾಧಿಸುತ್ತಿದೆ.

ರಾಣಿ ಎರಡನೇ ಎಲಿಜಬೆತ್ ಅವರ ತಾಯಿ, ರಾಣಿ ಎಲಿಜಬೆತ್‌ ಅವರು ಧರಿಸುತ್ತಿದ್ದ, ವಿಶ್ವದ ಅತಿದೊಡ್ಡ ಕಟ್ ವಜ್ರಗಳಲ್ಲಿ ಒಂದನ್ನು ಹೊಂದಿರುವ ರಾಣಿ ಮೇರಿಯ ಕಿರೀಟವನ್ನು ಕ್ಯಾಮಿಲ್ಲಾ ಆಯ್ಕೆ ಮಾಡಿದ್ದಾರೆ ಎಂದು ಬಕಿಂಗ್‌ಹ್ಯಾಮ್‌ ಅರಮನೆ ಘೋಷಿಸಿದೆ.

ADVERTISEMENT

2ನೇ ಎಲಿಜಬೆತ್‌ ಅವರ ಸ್ಮರಣಾರ್ಥ ಲಂಡನ್ ಗೋಪುರದಲ್ಲಿ ಪ್ರದರ್ಶನಕ್ಕಿಡಲಾಗಿರುವ ರಾಜಮನೆತನದ ಆಭರಣಗಳಲ್ಲಿ ರಾಣಿ ಮೇರಿ ಕಿರೀಟವನ್ನು ಇದೇ ಕಾರಣಕ್ಕೆ ಮಂಗಳವಾರ ತೆಗೆದಿರಿಸಲಾಗಿದೆ.

105.6 ಕ್ಯಾರೆಟ್ ತೂಗುವ ಕೊಹಿನೂರ್ ವಜ್ರವು ವಿಶ್ವದ ಅತಿದೊಡ್ಡ ಕಟ್ ವಜ್ರಗಳಲ್ಲಿ ಒಂದಾಗಿದೆ. ಇದನ್ನು 1850ರಲ್ಲಿ ರಾಣಿ ವಿಕ್ಟೋರಿಯಾಗೆ ಅರ್ಪಿಸಲಾಗಿತ್ತು ಎಂದು ‘ಸ್ಕೈ ನ್ಯೂಸ್‌’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.