ADVERTISEMENT

ಅಮಿತ್‌ ಶಾ ವಿರುದ್ಧದ ಕೆನಡಾ ಆರೋಪ ಕಳವಳಕಾರಿ: ಅಮೆರಿಕ

ಪಿಟಿಐ
Published 31 ಅಕ್ಟೋಬರ್ 2024, 14:47 IST
Last Updated 31 ಅಕ್ಟೋಬರ್ 2024, 14:47 IST
.
.   

ಪಿಟಿಐ

ವಾಷಿಂಗ್ಟನ್‌: ಸಿಖ್‌ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್‌ ಶಾ ಅವರ ಕೈವಾಡ ಇದೆ ಎಂದು ಕೆನಡಾ ಮಾಡಿರುವ ಆರೋಪ ಅತ್ಯಂತ ಕಳವಳಕಾರಿಯಾಗಿದೆ ಎಂದು ಅಮೆರಿಕ ಬುಧವಾರ ಪ್ರತಿಕ್ರಿಯಿಸಿದೆ.

’ಈ ವಿಷಯಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರದ ಜತೆ ಸಮಾಲೋಚನೆ ಮುಂದುವರಿಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಕೆನಡಾದ ರಾಷ್ಟ್ರೀಯ ಭದ್ರತಾ ಸಮಿತಿ ಮುಂದೆ ಮಂಗಳವಾರ ಹಾಜರಾಗಿದ್ದ ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್‌ ಮಾರಿಸನ್‌ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಡ್ರೌಯಿನ್, ಈ ಕುರಿತು ಗೋಪ್ಯ ಮಾಹಿತಿ ಸೋರಿಕೆಯಾದದ್ದನ್ನು ದೃಢಪಡಿಸಿದ್ದರು.

ಅಮಿತ್‌ ಶಾ ಅವರ ಕೈವಾಡದ ಕುರಿತು ಸೋರಿಕೆಯಾದ ಗೋಪ್ಯ ಮಾಹಿತಿಯು ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಆ ಪತ್ರಿಕೆಯ ವರದಿಗಾರನಿಗೆ ಈ ಮಾಹಿತಿಯನ್ನು ತಾನೇ ದೃಢಪಡಿಸಿದ್ದೆ ಎಂದು ಸಚಿವ ಡೇವಿಡ್‌ ಮಾರಿಸನ್‌ ಸಮಿತಿಗೆ ತಿಳಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.