ADVERTISEMENT

ವರ್ಚುವಲ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ಸಂಸದ

ಕೆನಡಾದ ಹೌಸ್‌ ಆಫ್‌ ಕಾಮನ್ಸ್‌ನ ವರ್ಚುವಲ್ ಸಭೆ

ಏಜೆನ್ಸೀಸ್
Published 15 ಏಪ್ರಿಲ್ 2021, 7:02 IST
Last Updated 15 ಏಪ್ರಿಲ್ 2021, 7:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಟ್ಟಾವ(ಕೆನಡಾ): ಕೆನಡಾದ ಸಂಸತ್ ಸದಸ್ಯರೊಬ್ಬರು ಹೌಸ್‌ ಆಫ್‌ ಕಾಮನ್ಸ್‌ ವರ್ಚುವಲ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ.

ಕೆನಡಾದ ಪಾಂಟಿಯಾಕ್‌ನ ಕ್ಯುಬೆಕ್ಜಿಲ್ಲೆಯನ್ನು 2015ರಿಂದ ಪ್ರತಿನಿಧಿಸುತ್ತಿರುವ ಸಂಸದ ವಿಲಿಯಮ್ ಅಮೊಸ್ ಬುಧವಾರ ನಡೆದ ವರ್ಚುವಲ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಆ ದೃಶ್ಯ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ಎದುರಿನ ಸ್ಕ್ರೀನ್‌ ಮೇಲೆ ಮೂಡಿದೆ.

‘ಕೋವಿಡ್‌ 19‘ ಸಾಂಕ್ರಾಮಿಕದ ಕಾರಣದಿಂದಾಗಿ ಹೌಸ್‌ ಆಫ್ ಕಾಮನ್ಸ್‌ ಸಭೆಯಲ್ಲಿ ಭೌತಿಕವಾಗಿ ಭಾಗವಹಿಸದ ಅನೇಕ ಜನಪ್ರತಿನಿಧಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡಿದ್ದರು.

ADVERTISEMENT

ದಿ ಕೆನಡಿಯನ್ ಪ್ರೆಸ್ ಸಂಗ್ರಹಿಸಿರುವ ವರ್ಚುವಲ್ ಸಭೆಯ ‘ಸ್ಕ್ರೀನ್‌ಶಾಟ್‘ನಲ್ಲಿ, ಅಮೋಸ್ ಅವರು ಕ್ವಿಬೆಕ್ ಮತ್ತು ಕೆನಡಿಯನ್ ಧ್ವಜಗಳ ನಡುವೆ ಮೇಜಿನ ಹಿಂದೆ ನಿಂತಿರುವುದು ಕಾಣುತ್ತದೆ. ಆ ಚಿತ್ರದಲ್ಲಿ ಅವರ ದೇಹದ ಗುಪ್ತಾಂಗಗಳನ್ನು ಮೊಬೈಲ್ ಫೋನ್‌ನಿಂದ ಮರೆ ಮಾಡಿರುವಂತೆ ಕಾಣುತ್ತದೆ.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೋಸ್, ‘ಇದೊಂದು ದುರದೃಷ್ಟಕರ ದೋಷ‘ ಎಂದು ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ನಾನು ಜಾಗಿಂಗ್‌ ಧಿರಿಸನ್ನು ಬದಲಿಸಲು ಕೋಣೆಗೆ ತೆರಳಿದ್ದಾಗ ಆಕಸ್ಮಿಕವಾಗಿ ವಿಡಿಯೊ ಆನ್‌ ಆಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿರುವುದಲ್ಲ. ಇದಕ್ಕಾಗಿ ನಾನು ಹೌಸ್‌ ಆಫ್‌ ಕಾಮನ್ಸ್‌ ಸಭೆಯ ಸಹೋದ್ಯೋಗಿಗಳ ಕ್ಷಮೆಯಾಚಿಸುತ್ತೇನೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.