ಹೊನೊಲುಲು: ಹವಾಯಿ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸರಕು ಸಾಗಣೆ ವಿಮಾನವೊಂದು ತುರ್ತು ಲ್ಯಾಂಡಿಂಗ್ ಮಾಡಿದೆ.
ವಿಮಾನದಲ್ಲಿದ್ದ ಇಬ್ಬರನ್ನೂ ಅಮೆರಿಕದ ಕೋಸ್ಟ್ ಗಾರ್ಡ್ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊನೊಲುಲುವಿಗೆ ಮರಳುವ ವೇಳೆ ಬೋಯಿಂಗ್ 737 ಸರಕು ಸಾಗಣೆ ವಿಮಾನದ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಪೈಲಟ್‌ಗಳು ತಕ್ಷಣ ವರದಿ ಮಾಡಿದ್ದರು.
ಅಮೆರಿಕದ ಕೋಸ್ಟ್ ಗಾರ್ಡ್ ಲೆ. ಕಮಾಂಡರ್ ಕರಿನ್ ಎವ್ಲಿನ್ ಮಾಹಿತಿ ಪ್ರಕಾರ, ಓರ್ವ ವ್ಯಕ್ತಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಕ್ವೀನ್ಸ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯನ್ನು ಹೊನೊಲುಲು ಅಗ್ನಿಶಾಮಕ ಇಲಾಖೆ ರಕ್ಷಿಸಿದೆ ಎಂದು ತಿಳಿಸಿದ್ದಾರೆ.
ಸ್ಟೇಟ್ ಡಿಪಾರ್ಟ್‌ಮೆಂಟ್ ಆಫ್ ಟ್ರಾನ್ಸ್‌ಪೋರ್ಟ್ ವರದಿ ಪ್ರಕಾರ, ಕಲೆಲೋವಾ ವಿಮಾನ ನಿಲ್ದಾಣದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಅವಘಡ ಸಂಭವಿಸಿದೆ.
ಘಟನೆಯನ್ನು ಅಮೆರಿಕ ಫೆಡರಲ್ ಏವಿಯೇಷನ್ ಅಥಾರಿಟಿ (ಎಫ್‌ಎಎ) ಹಾಗೂ ನ್ಯಾಷನಲ್ ಟ್ರಾನ್ಸ್‌ಪೋರ್ಟ್ ಸೇಫ್ಟಿ ಮಂಡಳಿ ತನಿಖೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.