PHOTO| ಉರಿಯುತ್ತಿರುವ ಹಡಗಿನಿಂದ ಶ್ರೀಲಂಕಾದ ಕಡಲ ತೀರದಲ್ಲಿ ಮಾಲಿನ್ಯದ ಭೀತಿ
ಕೊಲಂಬೊ: ಶ್ರೀಲಂಕಾದ ಕಡಲ ತೀರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ ಸರಕು ಸಾಗಣೆ ಹಡಗು ಒಡೆದು ಹೋಳಾಗುವ ಭೀತಿ ಎದುರಾಗಿದೆ. ಅದರಿಂದ ಹೊರಚೆಲ್ಲುವ ಅಪಾರ ಪ್ರಮಾಣದ ತೈಲವು ತೀರ ಪ್ರದೇಶದಲ್ಲಿ ಭಾರಿ ಮಾಲಿನ್ಯ ಸೃಷ್ಟಿ ಮಾಡುವ ಸಾಧ್ಯತೆಗಳಿವೆ.ಇನ್ನೊಂದೆಡೆ ಕಡಲ ತೀರದಲ್ಲಿ ಸೃಷ್ಟಿಯಾಗುವ ಮಾಲಿನ್ಯವನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.ಕೊಲಂಬೊದಿಂದ ಮರಾವಿಲಾವರೆಗಿನ ಕಡಲ ತೀರಕ್ಕೆ ಹಡಗಿನಿಂದ ಬರುವ ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುವುದು ಎಂದು ರಾಷ್ಟ್ರೀಯ ಜಲಸಂಪನ್ಮೂಲ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ನಾರಾ) ತಿಳಿಸಿದೆ.'ಎಕ್ಸ್‌ಪ್ರೆಸ್ ಪರ್ಲ್' ಎಂಬ ಹೆಸರಿನ ಸಿಂಗಪುರದ ಸರಕು ಸಾಗಣೆ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ಈಗಾಗಲೇ ನಿಯಂತ್ರಣ ಮೀರಿ ವ್ಯಾಪಿಸಿದೆ. ಒಂದು ಹಡಗು ಉರಿಯುತ್ತಲೇ ಇದೆ. ಇದರ ಬೆಂಕಿ ನಂದಿಸಲು ಭಾರತವು ಶ್ರೀಲಂಕಾಕ್ಕೆ ನೆರವಿನ ಹಸ್ತ ಚಾಚಿದೆ. ಭಾರತೀಯ ಕರಾವಳಿ ಕಾವಲು ಪಡೆಯ ಮೂರು ಹಡಗು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಶ್ರೀಲಂಕಾದ ನೌಕಾಪಡೆಯ ಹಡಗು ಮತ್ತು ನಾಲ್ಕು ಖಾಸಗಿ ಟಗ್‌ಗಳೂ ಉರಿಯುತ್ತಿರುವ ಹಡಗಿನ ಮೇಲೆ ನೀರು ಸುರಿಸುತ್ತಿವೆ. ಮಿಲಿಟರಿ ಹೆಲಿಕಾಪ್ಟರ್‌ನಿಂದ ಅಗ್ನಿನಂದಕ ರಾಸಾಯನಿಕಗಳನ್ನು ಹಾಕಲಾಗುತ್ತಿದೆ.ಈ ಹಡಗಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಟ್ಯಾಂಕ್‌ಗಳು ಮತ್ತು ನೈಟ್ರಿಕ್ ಆ್ಯಸಿಡ್‌ನ 1,486 ಕಂಟೇನರ್‌ಗಳಿವೆ.186 ಮೀಟರ್ (610 ಅಡಿ) ಉದ್ದದ ಹಡಗನ್ನು ಬೆಂಕಿ ತೀರಾ ದುರ್ಬಲಗೊಳಿಸಿದೆ. ಅದು ಒಡೆದು ತೈಲ ಹೊರಚೆಲ್ಲಲಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ.
ಪ್ರಜಾವಾಣಿ ವಾರ್ತೆ
Published 27 ಮೇ 2021, 11:19 IST
Last Updated 27 ಮೇ 2021, 11:19 IST
ಕೊಲಂಬೊ ಸಮೀಪ ಸಮುದ್ರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ ಸಿಂಗಪುರದ ಸರಕು ಸಾಗಣೆ ಹಡಗು 'ಎಕ್ಸ್‌ಪ್ರೆಸ್ ಪರ್ಲ್' (ಎಎಫ್‌ಪಿ ಚಿತ್ರ)
ಕೊಲಂಬೊ ಸಮೀಪ ಸಮುದ್ರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ ಸಿಂಗಪುರದ ಸರಕು ಸಾಗಣೆ ಹಡಗು 'ಎಕ್ಸ್‌ಪ್ರೆಸ್ ಪರ್ಲ್' (ಎಎಫ್‌ಪಿ ಚಿತ್ರ)
ಕೊಲಂಬೊ ಸಮೀಪ ಸಮುದ್ರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ ಸಿಂಗಪುರದ ಸರಕು ಸಾಗಣೆ ಹಡಗು 'ಎಕ್ಸ್‌ಪ್ರೆಸ್ ಪರ್ಲ್'ನಿಂದ ಮೇಲೆದ್ದಿರುವ ಭಾರಿ ಹೊಗೆ (ಎಎಫ್‌ಪಿ ಚಿತ್ರ)
'ಎಕ್ಸ್‌ಪ್ರೆಸ್ ಪರ್ಲ್' ಹಡಗಿನ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿರುವ ಹಡಗುಗಳು. ಬೆಂಕಿ ಆರಿಸುವ ಕಾರ್ಯದಲ್ಲಿ ಭಾರತವು ಶ್ರೀಲಂಕಾಕ್ಕೆ ನೆರವಾಗಿದೆ. ಭಾರತೀಯ ಕರಾವಳಿ ಕಾವಲುಪಡೆಯ ಮೂರು ಹಡಗುಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ. ನಾಲ್ಕು ಖಾಸಗಿ ಟಗ್‌ಗಳೂ ನೆರವಾಗಿವೆ. (ಎಪಿ)
ಸರಕು ಸಾಗಣೆ ಹಡಗು 'ಎಕ್ಸ್‌ಪ್ರೆಸ್ ಪರ್ಲ್'ನಲ್ಲಿದ್ದ ಕಂಟೈನರ್‌ಗಳು ಉರಿದು ಹೋಗಿರುವುದು. (ಎಎಫ್‌ಪಿ ಚಿತ್ರ)
ಸರಕು ಸಾಗಣೆ ಹಡಗು 'ಎಕ್ಸ್‌ಪ್ರೆಸ್ ಪರ್ಲ್'ನಲ್ಲಿದ್ದ ಕಂಟೈನರ್‌ಗಳು ಉರಿದು ಹೋಗಿರುವುದು. (ಎಎಫ್‌ಪಿ ಚಿತ್ರ)
'ಎಕ್ಸ್‌ಪ್ರೆಸ್ ಪರ್ಲ್' ಹಡಗಿನಿಂದ ಕಡಲ ತೀರಕ್ಕೆ ಬಂದು ಬಿದ್ದ ಕಂಟೈನರ್‌ಗಳು . (ರಾಯಿಟರ್ಸ್ ಚಿತ್ರ)
ಅಗ್ನಿ ದುರಂತಕ್ಕೀಡಾದ ಹಡಗಿನಿಂದ ಕೊಲಂಬೊದ ಕರಾವಳಿ ತೀರಕ್ಕೆ ಸಾಗಿಸಲಾದ ವಸ್ತುಗಳು (ರಾಯಿಟರ್ಸ್ ಚಿತ್ರ))
ಅಗ್ನಿ ದುರಂತಕ್ಕೀಡಾದ ಹಡಗಿನಿಂದ ಕೊಲಂಬೊದ ಕರಾವಳಿ ತೀರದಲ್ಲಿ ಸೃಷ್ಟಿಯಾಗಿರುವ ಮಾಲಿನ್ಯ. (ರಾಯಿಟರ್ಸ್ ಚಿತ್ರ)
ಅಗ್ನಿ ದುರಂತಕ್ಕೀಡಾದ ಹಡಗಿನಿಂದ ಕೊಲಂಬೊದ ಕರಾವಳಿ ತೀರಕ್ಕೆ ಬಂದು ಬಿದ್ದಿರುವ ಬೂದಿಯನ್ನು ತೆರವು ಮಾಡುತ್ತಿರುವ ಸ್ಥಳೀಯರು (ಎಎಫ್‌ಪಿ ಚಿತ್ರ)
ಹಡಗಿನ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತವಾಗಿರುವ ಟಗ್ (ಪಿಟಿಐ)
'ಎಕ್ಸ್‌ಪ್ರೆಸ್ ಪರ್ಲ್' ಹಡಗಿನಿಂದ ಮೇಲೆದ್ದಿರುವ ಭಾರಿ ಪ್ರಮಾಣದ ಹೊಗೆ (ಪಿಟಿಐ)
ಸಮುದ್ರ ತೀರ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ (ಎಎಫ್‌ಪಿ ಚಿತ್ರ)
ಸಮುದ್ರ ತೀರ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ (ರಾಯಿಟರ್ಸ್ ಚಿತ್ರ)
ಸಮುದ್ರ ತೀರ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ (ಎಎಫ್‌ಪಿ ಚಿತ್ರ)
ಸಮುದ್ರ ತೀರ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ (ಎಎಫ್‌ಪಿ ಚಿತ್ರ)