ADVERTISEMENT

ಪಾಕ್‌ನಲ್ಲಿ ಆರ್ಥಿಕ ಸಂಕಟ: 1.5 ಲಕ್ಷ ಸರ್ಕಾರಿ ಹುದ್ದೆ ಕಡಿತ; 6ಸಚಿವಾಲಯಗಳು ಬಂದ್

ಪಿಟಿಐ
Published 30 ಸೆಪ್ಟೆಂಬರ್ 2024, 2:39 IST
Last Updated 30 ಸೆಪ್ಟೆಂಬರ್ 2024, 2:39 IST
<div class="paragraphs"><p>ಪಾಕಿಸ್ತಾನದ ಕರಾಚಿಯ ಮಾರುಕಟ್ಟೆಯ ನೋಟ</p></div>

ಪಾಕಿಸ್ತಾನದ ಕರಾಚಿಯ ಮಾರುಕಟ್ಟೆಯ ನೋಟ

   

ರಾಯಿಟರ್ಸ್‌ ಚಿತ್ರ

ಇಸ್ಲಾಮಾಬಾದ್‌: ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ದೇಶವನ್ನು ತಹಬದಿಗೆ ತರಲು ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ಇದಕ್ಕಾಗಿ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಕಡಿತಗೊಳಿಸಿ, ಆರು ಸಚಿವಾಲಯಗಳನ್ನು ಮುಚ್ಚಿ, ಎರಡು ಸಚಿವಾಲಯಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ.

ADVERTISEMENT

ಆರ್ಥಿಕ ಸಂಕಷ್ಟದಿಂದ ಪಾರಾಗಲು ಇತ್ತೀಚೆಗೆ ಐಎಂಎಫ್‌ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಪಾಕ್‌ ಸರ್ಕಾರಕ್ಕೆ ₹700 ಕೋಟಿ ಸಾಲವನ್ನು ನೀಡುವುದಾಗಿ ಹೇಳಿತ್ತು. ಇದರ ಭಾಗವಾಗಿ ಕಳೆದ ಸೋಮವಾರ (ಸೆ.26) ಮೊದಲ ಕಂತಿನಲ್ಲಿ ₹100 ಕೋಟಿ ಹಣವನ್ನು ನೀಡಿದೆ.

ಸಾಲ ನೀಡುವ ಮೊದಲು ಐಎಂಎಫ್‌ ಕೆಲವು ಷರತ್ತುಗಳನ್ನು ವಿಧಿಸಿದ್ದು, ಅನಗತ್ಯ ವೆಚ್ಚಗಳಿಗೆ ಕಡಿವಾಣ, ತೆರಿಗೆ–ಜಿಡಿಪಿಗಳ ಅನುಪಾತ ಹೆಚ್ಚಳ, ಕೃಷಿ ಮತ್ತು ರಿಯಲ್‌ ಎಸ್ಟೇಟ್‌ಗಳ ಮೇಲೆ ತೆರಿಗೆ, ಸಬ್ಸಿಡಿಗಳ ಮೇಲೆ ಮಿತಿ ಹೇರಬೇಕು ಎನ್ನುವ ಷರತ್ತುಗಳು ಒಳಗೊಂಡಿವೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕ್‌ ಹಣಕಾಸು ಸಚಿವ ಮೊಹಮ್ಮದ್‌ ಔರಂಗಜೇಬ್‌, ‘ಐಎಂಎಫ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಷರತ್ತುಗಳಿಗೂ ಒಪ್ಪಿಗೆ ನೀಡಲಾಗಿದೆ. ತೆರಿಗೆ ಪಾವತಿಸದವರಿಗೆ ಇನ್ನು ಮುಂದೆ ಆಸ್ತಿ ಅಥವಾ ವಾಹನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ದೇಶದ ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಜತೆಗೆ ದೇಶದ ವಿದೇಶಿ ವಿನಿಮಯ ಸಂಗ್ರಹವು ಅತ್ಯಧಿಕ ಮಟ್ಟವನ್ನು ತಲುಪಿದೆ’ ಎಂದು ಪ್ರತಿಪಾದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.