ADVERTISEMENT

ಚೀನಾ ಬಳಿ ಮತ್ತೆ ₹11,000 ಕೋಟಿ ಸಾಲ ಕೇಳಿದ ಪಾಕಿಸ್ತಾನ

ಪಿಟಿಐ
Published 27 ಅಕ್ಟೋಬರ್ 2024, 14:40 IST
Last Updated 27 ಅಕ್ಟೋಬರ್ 2024, 14:40 IST
ಪಾಕಿಸ್ತಾನ, ಚೀನಾ ರಾಷ್ಟ್ರಗಳ ಧ್ವಜಗಳು 
ಪಾಕಿಸ್ತಾನ, ಚೀನಾ ರಾಷ್ಟ್ರಗಳ ಧ್ವಜಗಳು    

ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ, ಚೀನಾ ಬಳಿ ಹೆಚ್ಚುವರಿ 10,000 ಕೋಟಿ ಯುವಾನ್‌ (₹11,700 ಕೋಟಿ) ಸಾಲವನ್ನು ಕೋರಿದೆ ಎಂದು ಭಾನುವಾರ ಮಾಧ್ಯಮ ವರದಿಗಳು ತಿಳಿಸಿವೆ.

ಅಮೆರಿಕದಲ್ಲಿ ನಡೆದ ಐಎಮ್‌ಎಫ್‌ ಹಾಗೂ ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆ ವೇಳೆ ಚೀನಾದ ಹಣಕಾಸು ಸಚಿವ ಲಿಯಾವೊ ಮಿನ್‌ ಅವರನ್ನು ಭೇಟಿಯಾದ ಪಾಕಿಸ್ತಾನ ಹಣಕಾಸು ಸಚಿವ ಮುಹಮ್ಮದ್‌ ಔರಂಗಜೇಬ್ ಅವರು ಕರೆನ್ಸಿ ಸ್ವಾಪ್‌ ಒಪ್ಪಂದದ ಅಡಿಯಲ್ಲಿ ಚೀನಾದಿಂದ ತಮ್ಮ ದೇಶಕ್ಕೆ ಸಿಗಬಹುದಾದ ಒಟ್ಟು ಸಾಲ ಸೌಲಭ್ಯವನ್ನು 40 ಶತಕೋಟಿ ಯುವಾನ್‌ಗೆ ಹೆಚ್ಚಿಸುವಂತೆ ವಿನಂತಿಸಿದರು. 

ಈಗಾಗಲೇ ಚೀನಾ ₹36,000 ಕೋಟಿ ಸಾಲವನ್ನು ‍ಪಾಕಿಸ್ತಾನಕ್ಕೆ ನೀಡಿದೆ. ಹೀಗಾಗಿ ಈ ಪ್ರಸ್ತಾವಕ್ಕೆ ಚೀನಾ ಒಪ್ಪಿಗೆ ಸೂಚಿಸಿದರೆ ಒಟ್ಟು ಸಾಲದ ನೆರವು ₹47,900 ಕೋಟಿಗೆ ತಲುಪಲಿದೆ ಎಂದು ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ ವರದಿ ಮಾಡಿದೆ. 

ADVERTISEMENT

ಹೆಚ್ಚಿನ ಸಾಲ ನೀಡುವಂತೆ ಚೀನಾ ಬಳಿ ಪಾಕಿಸ್ತಾನ ವಿನಂತಿ ಮಾಡುತ್ತಲೇ ಬಂದಿದೆ. ಆದರೆ ಈ ಹಿಂದಿನ ಪ್ರಸ್ತಾವಗಳನ್ನು ಚೀನಾ ತಿರಸ್ಕರಿಸಿದೆ. ಆದರೂ ಚೀನಾವು ಪಾಕಿಸ್ತಾನವು ಈಗಿರುವ ಸಾಲ ಮರುಪಾವತಿ ಮಾಡಬೇಕಿರುವ ಅವಧಿಯನ್ನು ಮೂರು ವರ್ಷಗಳ ವಿಸ್ತರಿಸಿ 2027ಕ್ಕೆ ಮುಂದೂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.