ADVERTISEMENT

ಕಾಶ್ಮೀರದತ್ತ ಅಲ್‌–ಕೈದಾ ಚಿತ್ತ: ವಿಶ್ವಸಂಸ್ಥೆ ವರದಿ

ಪಿಟಿಐ
Published 30 ಮೇ 2022, 12:25 IST
Last Updated 30 ಮೇ 2022, 12:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ನಿಷೇಧಿತ ಉಗ್ರ ಸಂಘಟನೆ ಭಾರತ ಉಪಖಂಡದ ಅಲ್–ಕೈದಾ (ಎಕ್ಯೂಐಎಸ್) ಸದ್ಯತನ್ನ ಕಾರ್ಯಚಟುವಟಿಕೆಯನ್ನು ಅಫ್ಗಾನಿಸ್ತಾನದಿಂದ ಕಾಶ್ಮೀರದತ್ತವಿಸ್ತರಿಸಲು ಒತ್ತು ನೀಡಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧ ಪರಿವೀಕ್ಷಣಾ ತಂಡ ತನ್ನ 13ನೇ ವರದಿಯಲ್ಲಿ ಈ ಮಾಹಿತಿ ನೀಡಿದೆ. ತಾಲಿಬಾನ್‌ ಮತ್ತಿತರ ಉಗ್ರ ಸಂಘಟನೆಗಳು ಅಫ್ಗಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುತ್ತಿವೆ ಎಂದು ವರದಿಯಲ್ಲಿ ತಿಳಿಸಿದೆ.

ಹಾಗೆಯೇ ಅಲ್‌–ಕೈದಾ ಸಂಘಟನೆಯ ಅಧೀನ ಸಂಸ್ಥೆ ಎಕ್ಯೂಐಎಸ್‌ ಅಫ್ಗಾನಿಸ್ತಾನದಲ್ಲಿಯೇ ಅತಿ ಹೆಚ್ಚು ಉಗ್ರರ ಪಡೆಯನ್ನು ಹೊಂದಿದೆ.ಆದಾಗ್ಯೂ ಅದು ಅಲ್ಲಿ ಕಡಿಮೆ ಸ್ಥಾನಮಾನ ಹೊಂದಿದೆ.ಹೀಗಾಗಿ ಮರುಸಂಘಟನೆಗೆಎಕ್ಯೂಐಎಸ್‌ ನಿರ್ಧರಿಸಿದೆ. 2020ರಲ್ಲಿ ಅಲ್‌–ಕೈದಾ ನಿಯತಕಾಲಿಕೆ ಹೆಸರು ‘ನವಾ–ಇ–ಅಫ್ಗನ್‌ ಜಿಹಾದ್‌’ನಿಂದ ‘ನವಾ–ಇ–ಗಝ್ವಾ–ಇ–ಹಿಂದ್‌’ ಎಂದು ಬದಲಾಗಿದೆ. ಈ ಮೂಲಕ ಅಫ್ಗಾನಿಸ್ತಾನದಿಂದ ಕಾಶ್ಮೀರದತ್ತ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಲು ಸಲಹೆ ನೀಡಿದೆ ಎಂದು ಅದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.