ಬೀಜಿಂಗ್:ಮೂವರು ಗಗನಯಾನಿಗಳನ್ನು ಹೊತ್ತ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸಲ್ಪಟ್ಟಿತು.
ನಿಯೆ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಗಗನಯಾನಿಗಳನ್ನು ಹೊತ್ತ ಶೆನ್‌ಶಾವ್-12 ಆಕಾಶನೌಕೆ ಜಿಯುಕ್ವಾನ್ ಉಪಗ್ರಹ ಕೇಂದ್ರದಿಂದ ಬೆಳಗ್ಗೆ 9:22ಕ್ಕೆ ಉಡಾವಣೆಯಾಗಿದೆ.
ಇಬ್ಬರು ಅನುಭವಿ ಗಗನಯಾನಿಗಳಾಗಿದ್ದರೆ, ಮತ್ತೋರ್ವ ಹೊಸಬರಾಗಿದ್ದು, ಬಾಹ್ಯಾಕಾಶ ಕೇಂದ್ರದಲ್ಲಿ ನಿರ್ವಹಣೆ ಮತ್ತು ಮುಂದಿನ ಯೋಜನೆಗೆ ನಿಲ್ದಾಣವನ್ನು ಸಜ್ಜುಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಮೂವರು ಪುರುಷ ಗಗನಯಾತ್ರಿಗಳನ್ನು ಗುರುವಾರ ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಜ್ಜಾಗಿರುವುದಾಗಿ ’ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ’ (ಸಿಎಂಎಸ್‌ಎ) ಬುಧವಾರ ತಿಳಿಸಿತ್ತು.
‘ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಮೂವರು ಗಗನ ಯಾತ್ರಿಗಳು ಮೂರು ತಿಂಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ‘ ಎಂದು ಸಿಎಮ್ಎಸ್ಎ ನಿರ್ದೇಶಕ ಸಹಾಯಕ ಜಿ ಕಿಮಿಂಗ್ ಉಡಾವಣಾ ಕೇಂದ್ರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಸಮಯದಲ್ಲಿ ಇದು ಮೊದಲ ಮಾನವಸಹಿತ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.