ADVERTISEMENT

ಚೀನಾ–ಕಾಂಬೊಡಿಯಾ ಸಮರಾಭ್ಯಾಸ ಆರಂಭ

​ಪ್ರಜಾವಾಣಿ ವಾರ್ತೆ
Published 16 ಮೇ 2024, 14:31 IST
Last Updated 16 ಮೇ 2024, 14:31 IST
ಚೀನಾ ಮತ್ತು ಕಾಂಬೋಡಿಯ ಸೇನೆಯ ಸಮರಭ್ಯಾಸಕ್ಕೆ ಗುರುವಾರ ಚಾಲನೆ ನೀಡಲಾಯಿತು  – ಎಎಫ್‌ಪಿ ಚಿತ್ರ 
ಚೀನಾ ಮತ್ತು ಕಾಂಬೋಡಿಯ ಸೇನೆಯ ಸಮರಭ್ಯಾಸಕ್ಕೆ ಗುರುವಾರ ಚಾಲನೆ ನೀಡಲಾಯಿತು  – ಎಎಫ್‌ಪಿ ಚಿತ್ರ    

ಸ್ವಯ್‌ ಚೋಕ್‌ (ಕಾಂಬೊಡಿಯಾ): ಚೀನಾ ಮತ್ತು ಕಾಂಬೊಡಿಯಾ 15 ದಿನಗಳ ಸಮರಾಭ್ಯಾಸಕ್ಕೆ ಗುರುವಾರ ಚಾಲನೆ ನೀಡಿವೆ.

ಇದರಿಂದಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಮೇಲೆ ಚೀನಾದ ಪ್ರಭಾವದ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಕಾಂಬೊಡಿಯಾದ 1,315 ಮತ್ತು 760 ಚೀನಾದ ಯೋಧರು ಸಮರಾಭ್ಯಾಸ ಪಾಲ್ಗೊಂಡಿದ್ದಾರೆ. ಜತೆಗೆ, ಚೀನಾದ 3 ಮತ್ತು ಕಾಂಬೋಡಿಯಾದ 11 ಯುದ್ಧನೌಕೆಗಳು ಭಾಗಿಯಾಗಿವೆ.

ADVERTISEMENT

ಥಾಯ್ಲೆಂಡ್‌ನ ಪ್ರಮುಖ ಸ್ಥಳದಲ್ಲಿ ನೌಕಾನೆಲೆಯನ್ನು ಸ್ಥಾಪಿಸಲು ಮುಂದಾಗಿರುವ ಚೀನಾದ ನಡೆ ಅಮೆರಿಕ ಮತ್ತು ಇತರ ರಾಷ್ಟ್ರಗಳಲ್ಲಿ ಆತಂಕ ಉಂಟುಮಾಡಿದೆ. 

ಬೇರೆ ದೇಶಗಳ ರಕ್ಷಣಾ ಪಡೆಗಳನ್ನು ನಿಯೋಜಿಸುವುದಕ್ಕೆ ಕಾಂಬೊಡಿಯಾದಲ್ಲಿ ನಿರ್ಬಂಧವಿದೆ. ಆದರೆ ಚೀನಾದ ಎರಡು ಯುದ್ಧನೌಕೆಗಳು ಕೇವಲ ಪರೀಕ್ಷೆ ನಡೆಸಿವೆ. ಸಮರಾಭ್ಯಾಸದಲ್ಲಿಯೂ ಚೀನಾ ಭಾಗಿಯಾಗಿದೆ’ ಎಂದು ಕಾಂಬೋಡಿಯಾದ ರಕ್ಷಣಾ ಸಚಿವರು ತಿಳಿಸಿದ್ದಾರೆ.

2016ರಿಂದ ನಿರಂತರವಾಗಿ ಉಭಯ ದೇಶಗಳು ’ಗೋಲ್ಡನ್‌ ಡ್ರ್ಯಾಗನ್‌’ ಸಮರಭ್ಯಾಸ ನಡೆಯುತ್ತಿದೆ. ಆದರೆ ಅಮೆರಿಕದೊಂದಿಗೆ ನಡೆಸುತ್ತಿದ್ದ ಸಮರಾಭ್ಯಾಸವನ್ನು ಕಾಂಬೊಡಿಯಾ ರದ್ದುಗೊಳಿಸಿದೆ.

ಆಗ್ನೇಯ ಏಷ್ಯಾದಲ್ಲಿ ಕಾಂಬೊಡಿಯಾ, ಚೀನಾದ ಆಪ್ತ ರಾಷ್ಟ್ರವಾಗಿದೆ. ವಿಮಾನ ನಿಲ್ಲಾಣಗಳ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲು ಕಾಂಬೊಡಿಯಾಗೆ ಚೀನಾ ನೆರವು ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.