ಬೀಜಿಂಗ್ (ಪಿಟಿಐ): ಅಮೆರಿಕ ನಿರ್ಬಂಧ ವಿಧಿಸಿರುವ ಜನರಲ್ ಲಿ.ಶಾಂಗ್ಫು ಅವರನ್ನು ಚೀನಾ ಭಾನುವಾರ ದೇಶದ ನೂತನ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಿದೆ. ಇದಕ್ಕೂ ಮುನ್ನ ಈ ಹುದ್ದೆಯಲ್ಲಿ ಜ.ವಿ. ಫೆಂಘೆ ಅವರಿದ್ದರು.
ಬಾಹ್ಯಾಕಾಶ ಎಂಜಿನಿಯರ್ ಮತ್ತು ಪೇಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಜನರಲ್ ಆಗಿರುವ ಶಾಂಗ್ಫು ಅವರಿಗೆ ಅಮೆರಿಕ 2018ರಲ್ಲಿ ನಿರ್ಬಂಧ ವಿಧಿಸಿದೆ. ರಷ್ಯಾದ ಮೇಲಿನ ನಿರ್ಬಂಧದ ಹೊರತಾಗಿಯೂ ಚೀನಾ ಅಲ್ಲಿಂದ ಸುಖೋಯ್ ಎಸ್‌ಯು–35 ಯುದ್ಧ ವಿಮಾನ ಮತ್ತು ಎಸ್–400 ಕ್ಷಿಪಣಿ ಖರೀದಿಸಿದ ಕಾರಣ ಶಾಂಗ್ಫು ಅವರ ಮೇಲೆ ನಿರ್ಬಂಧ ವಿಧಿಸಿತ್ತು.
ಪ್ರತಿ ಹತ್ತು ವರ್ಷಗಳಿಗೊಮ್ಮೆ ಚೀನಾ ಸರ್ಕಾರದ ಅಧಿಕಾರಿಗಳ ಬದಲಾವಣೆಯ ಭಾಗವಾಗಿ ಹಲವು ಸಂಪುಟ ಸಚಿವರನ್ನೂ ಹೊಸದಾಗಿ ನೇಮಕ ಮಾಡಲಾಗಿದೆ. ಶನಿವಾರ ಶಾಂಗ್ಫು ಅವರನ್ನು ಸೆಂಟ್ರಲ್ ಮಿಲಿಟರಿ ಕಮಿಷನ್ (ಸಿಎಂಸಿ) ಸದಸ್ಯರಾಗಿ ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್ ನೇಮಕ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.