ನವದೆಹಲಿ: ಷಿಂಜಿಯಾಂಗ್ ಪ್ರದೇಶದ ಹಲವು ಭಾಗಗಳಲ್ಲಿ ರಂಜಾನ್ ಮಾಸದ ಅಂತ್ಯದಲ್ಲಿ ಬರುವ ಈದ್–ಉಲ್–ಫಿತರ್ ರಜಾ ದಿನಗಳಲ್ಲಿ ಉಯಿಘರ್ ಮುಸಲ್ಮಾನ ಸಮುದಾಯವು ಮಸೀದಿ ಅಲ್ಲದೆ, ಮನೆಗಳಲ್ಲೂ ನಮಾಜ್ ಮಾಡುವುದನ್ನು ಚೀನಾದ ಅಧಿಕಾರಿಗಳು ನಿರ್ಬಂಧಿಸಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ತಿಳಿಸಿವೆ.
ಆದರೆ, ಪೊಲೀಸರ ಬಿಗಿ ಕಣ್ಗಾವಲಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸ್ಥಳೀಯ ಮಸೀದಿಯಲ್ಲಿ ನಮಾಜು ಮಾಡಲು ಅವಕಾಶ ನೀಡಲಾಗಿದೆ ಎಂದು ‘ರೇಡಿಯೊ ಫ್ರೀ ಏಷ್ಯಾ’ ವರದಿ ನೀಡಿದೆ.
2017ರಿಂದ ಚೀನಾವು ’ಧಾರ್ಮಿಕ ಉಗ್ರವಾದ’ ಹತ್ತಿಕ್ಕುವುದರ ಜೊತೆಗೆ ನಿಯಂತ್ರಿಸುತ್ತಿದೆ. ಹೆಚ್ಚಾಗಿ ಉಯಿಘರ್ ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಚೀನಾದ ಬುಲುಂಗ್ ಪ್ರದೇಶದಲ್ಲಿ ಒಂದೇ ಮಸೀದಿಯಿದ್ದು, ಅಲ್ಲಿ 60 ವರ್ಷ ಮೇಲ್ಪಟ್ಟ ಮೂವರು ಮಾತ್ರ ನಮಾಜು ಮಾಡಿದರು. ಈ ಸಂದರ್ಭ ಕಣ್ಗಾವಲಿಗೆ ಮೂವರು ಪೊಲೀಸ್ ಅಧಿಕಾರಿಗಳು ಹಾಜರಿದ್ದು, ನಮಾಜು ಮಾಡಿದವರ ಹೆಸರನ್ನು ಗುರುತು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.