ADVERTISEMENT

ತೈವಾನ್ ಅಧ್ಯಕ್ಷರಿಗೆ ಫಿಲಿಪ್ಪೀನ್ಸ್‌ ಅಭಿನಂದನೆ: ಚೀನಾ ತೀವ್ರ ಆಕ್ಷೇಪ

ಏಜೆನ್ಸೀಸ್
Published 16 ಜನವರಿ 2024, 15:15 IST
Last Updated 16 ಜನವರಿ 2024, 15:15 IST
ಚೀನಾ
ಚೀನಾ   

ಬೀಜಿಂಗ್‌: ತೈವಾನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಲಾಯ್ ಚಿಂಗ್ ಟೆ ಅವರಿಗೆ ಫಿಲಿಪ್ಪೀನ್ಸ್‌ ಅಧ್ಯಕ್ಷ ಫೆರ್ಡಿನಾಂಡ್ ಮ್ಯಾರ್ಕೊ ಜೂನಿಯರ್ ಅವರು ಅಭಿನಂದನಾ ಸಂದೇಶ ಕಳುಹಿಸಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಫಿಲಿಪ್ಪೀನ್ಸ್‌ನ ರಾಯಭಾರಿಯನ್ನು ಕರೆಯಿಸಿಕೊಂಡ ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಆಕ್ಷೇಪ ದಾಖಲಿಸಿತು ಎಂದು ಸಚಿವಾಲಯದ ವಕ್ತಾರ ಮಾವೊ ನಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಈ ಮೂಲಕ ಫಿಲಿಪ್ಪೀ‌ನ್ಸ್ ಚೀನಾಗೆ ನೀಡಿದ್ದ ರಾಜಕೀಯ ಬದ್ಧತೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಚೀನಾ ಆಕ್ಷೇಪಿಸಿದೆ. ತೈವಾನ್‌ ತನ್ನ ಭೂಭಾಗವಾಗಿದ್ದು, ಅಗತ್ಯಬಿದ್ದಲ್ಲಿ ಸೇನಾ ಬಲದ ನೆರವಿನಿಂದ ವಶಕ್ಕೆ ಪಡೆಯಲಾಗುವುದು ಚೀನಾ ಪ್ರತಿಪಾದಿಸುತ್ತಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.