ADVERTISEMENT

ಲಡಾಖ್‌ | ಭಾರತದೊಂದಿಗೆ ಕೆಲಸ ಮಾಡಲು ಒಪ್ಪಿದ ಚೀನಾ; ಎಲ್‌ಎಸಿಯಲ್ಲಿ ಜಂಟಿ ಗಸ್ತು

ಪಿಟಿಐ
Published 22 ಅಕ್ಟೋಬರ್ 2024, 9:26 IST
Last Updated 22 ಅಕ್ಟೋಬರ್ 2024, 9:26 IST
<div class="paragraphs"><p>ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌</p></div>

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌

   

ರಾಯಿಟರ್ಸ್‌ ಚಿತ್ರ

ಬೀಜಿಂಗ್‌: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಇನ್ನೂ ಸಂಘರ್ಷ ಉಳಿದಿರುವ ಸ್ಥಳಗಳಲ್ಲಿ ಗಸ್ತು ತಿರುಗಲು ಭಾರತದೊಂದಿಗೆ ಒಪ್ಪಂದಕ್ಕೆ ಬಂದಿರುವುದಾಗಿ ಚೀನಾ ಮಂಗಳವಾರ ದೃಢಪಡಿಸಿದೆ.

ADVERTISEMENT

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌, ‘ಇತ್ತೀಚೆಗೆ ಚೀನಾ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮತ್ತು ಮಿಲಿಟರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಉತ್ತಮ ಸಂವಹನ ನಡೆಯುತ್ತಿದೆ. ಗಡಿಗೆ ಸಂಬಂಧಿಸಿದ ವಿಚಾರದಲ್ಲಿ ಉಭಯ ದೇಶಗಳು ಈ ನಿರ್ಣಯವನ್ನು ತೆಗೆದುಕೊಂಡಿದೆ’ ಎಂದು ತಿಳಿಸಿದ್ದಾರೆ.

ಭಾರತದೊಂದಿಗೆ ಕೆಲಸ ಮಾಡಲು ಚೀನಾ ಒಪ್ಪಿಕೊಂಡಿದೆ ಎಂದ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ.

ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವಿನ ದ್ವಿಪಕ್ಷೀಯ ಮಾತುಕತೆಯ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಪೂರ್ವ ಲಡಾಖ್‌ನಲ್ಲಿನ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಸ್ತು ತಿರುಗಲು ಚೀನಾದೊಂದಿಗೆ ಒಪ್ಪಂದಕ್ಕೆ ಮಾಡಿಕೊಂಡಿರುವುದಾಗಿ ಭಾರತ ಘೋಷಣೆ ಮಾಡಿತ್ತು. ಎರಡು ಸೇನೆಗಳ ನಡುವಿನ ನಾಲ್ಕು ವರ್ಷಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಈ ಒಪ್ಪಂದ ಮಹತ್ವದ ಪಾತ್ರವಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.