ಬೀಜಿಂಗ್: ಚೀನಾ ತನ್ನ ಪರಮಾಣು ಶಸ್ತ್ರಾಗಾರವನ್ನು ವ್ಯಾಪಕವಾಗಿ ವಿಸ್ತರಿಸುತ್ತಿದೆ ಹಾಗೂ ಪರಮಾಣು ಯುದ್ಧ ಮತ್ತು ಶಸ್ತ್ರಾಸ್ತ್ರ ಬಳಕೆಯನ್ನು ತಡೆಯುವ ಬಗ್ಗೆ ಐದು ಪರಮಾಣು ರಾಷ್ಟ್ರಗಳುಜಂಟಿ ಹೇಳಿಕೆ ನೀಡಲು ಪ್ರಮುಖ ಪಾತ್ರ ವಹಿಸಿರುವ ಶ್ರೇಯ ಪಡೆದಿದೆ ಎಂಬ ಅಮೆರಿಕ ಆರೋಪವನ್ನು ಚೀನಾ ಮಂಗಳವಾರ ಅಲ್ಲಗಳೆದಿದ್ದು, ಇದು ಸುಳ್ಳು ಎಂದು ಹೇಳಿದೆ.
ಪರಮಾಣು–ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳ ನಡುವಿನ ಯುದ್ಧವನ್ನು ತಪ್ಪಿಸುವುದು ಮತ್ತು ಅಂತಹ ಸಂದರ್ಭ ಉಂಟಾಗದಂತೆ ಎಚ್ಚರ ವಹಿಸುವುದು ತಮ್ಮ ಜವಾಬ್ದಾರಿ. ಪರಮಾಣು ಯುದ್ಧವನ್ನು ಗೆಲ್ಲಲಾಗುವುದಿಲ್ಲ. ಅಂತಹ ಯುದ್ಧವನ್ನು ಎಂದಿಗೂ ಮಾಡಬಾರದು’ ಎಂದು ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ ಸೋಮವಾರ ಹೊರಡಿಸಿದ ಜಂಟಿ ಹೇಳಿಕೆಯೊಂದರಲ್ಲಿ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.