ADVERTISEMENT

ಫಿಲಿಪ್ಪೀನ್ಸ್‌ ಕರಾವಳಿ ಬಳಿ ಚೀನಾ ಯುದ್ಧನೌಕೆ

ಪಿಟಿಐ
Published 1 ಜುಲೈ 2024, 14:42 IST
Last Updated 1 ಜುಲೈ 2024, 14:42 IST
   

ಬೀಜಿಂಗ್: ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಫಿಲಿಪ್ಪೀನ್ಸ್‌ ಕರಾವಳಿ ಪ್ರದೇಶಕ್ಕೆ ಚೀನಾ ಮತ್ತೊಂದು ಯುದ್ಧನೌಕೆಯನ್ನು ಕಳುಹಿಸಿಕೊಟ್ಟಿದೆ. 

ವಿವಾದಿತ ದಕ್ಷಿಣ ಚೀನಾ ಪ್ರದೇಶದಲ್ಲಿರುವ ಎರಡನೇ ಥಾಮಸ್‌ ಶೋಲ್ (ನೀರಿನಲ್ಲಿ ಮುಳುಗಿರುವ ಹವಳದ ದಿಬ್ಬ ಪ್ರದೇಶ) ಮೇಲೆ ಹಕ್ಕು ಸ್ಥಾಪಿಸಲು ಚೀನಾ ಮತ್ತು ಫಿಲಿಪ್ಪೀನ್ಸ್‌ ನಡುವೆ ಹಲವು ಸಮಯಗಳಿಂದ ಪೈಪೋಟಿ ಏರ್ಪಟ್ಟಿದೆ.

‘ಶಾನ್‌ಡಂಗ್‌’ ಯುದ್ಧನೌಕೆ ಫಿಲಿಪ್ಪೀನ್ಸ್‌ ಕರಾವಳಿ ಪ್ರದೇಶದಲ್ಲಿ ಗಸ್ತು ತಿರುಗುವುದು ಕಂಡುಬಂದಿದೆ’ ಎಂದು ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ ಸೋಮವಾರ ವರದಿ ಮಾಡಿದೆ. 

ADVERTISEMENT

ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ಶಾನ್‌ಡಂಗ್‌ ನೌಕೆಯು ನಿಯಮಿತ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಚೀನಾದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

‘ಸಮುದ್ರದ ಗಡಿಯ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಚೀನಾ ತನ್ನ ಬದ್ಧತೆ’ಯನ್ನು ಅಮೆರಿಕ ಮತ್ತು ಫಿಲಿಪ್ಪೀನ್ಸ್‌ಗೆ ಸ್ಪಷ್ಟಪಡಿಸುವ ಉದ್ದೇಶ ಇದರ ಹಿಂದೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಕೆಲವಾರಗಳ ಹಿಂದೆ ದಕ್ಷಿಣ ಚೀನಾ ಪ್ರದೇಶದಲ್ಲಿ ತನ್ನ ನೌಕೆಯೊಂದು ಚೀನಾದ ನೌಕೆಗೆ ಡಿಕ್ಕಿಯಾಗಿತ್ತು ಎಂದು ಫಿಲಿಪ್ಪೀನ್ಸ್‌ ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.