ನವದೆಹಲಿ: ಗಡಿನಿಯಂತ್ರಣ ರೇಖೆಯುದ್ದಕ್ಕೂ ರಕ್ಷಣಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನಕ್ಕೆ ಚೀನಾವು ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೀನಾವು ಪಾಕಿಸ್ತಾನಕ್ಕೆ ಮಾನವರಹಿತ ವೈಮಾನಿಕ ವಾಹನಗಳನ್ನು ಒದಗಿಸುತ್ತಿದೆ ಮತ್ತು ಸಂವಹನ ಗೋಪುರಗಳನ್ನು ಹಾಗೂ ಭೂಗತ ಕೇಬಲ್‌ಗಳನ್ನು ಸ್ಥಾಪಿಸಲು ನೆರವಾಗುತ್ತಿದೆ ಎಂದಿದ್ದಾರೆ.
ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮತ್ತು ಜಲವಿದ್ಯುತ್ ಯೋಜನೆಗಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾವು ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ ಎಂದೂ ವಿವರಿಸಿದ್ದಾರೆ.
ಟ್ರಕ್ ಮೇಲೆ ಅಳವಡಿಸಬಹುದಾದ ಎಸ್‌ಎಚ್–15 ಹೊವಿಟ್ಜರ್ ಗನ್ ಅನ್ನು ಎಲ್‌ಒಸಿ ಬಳಿ ಪಾಕಿಸ್ತಾನ ಸ್ಥಾಪಿಸಿದ್ದು, ಇವುಗಳ ಖರೀದಿಗಾಗಿ ಚೀನಾದ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.