ADVERTISEMENT

ಸತತ 8ನೇ ಬಾರಿಗೆ ರಕ್ಷಣಾ ಬಜೆಟ್‌ ಗಾತ್ರ ಹೆಚ್ಚಿಸಿದ ಚೀನಾ

ಪಿಟಿಐ
Published 5 ಮಾರ್ಚ್ 2023, 6:02 IST
Last Updated 5 ಮಾರ್ಚ್ 2023, 6:02 IST
ಚೀನಾ ಮಿಲಿಟರಿ ಪಡೆ (ಸಾಂದರ್ಭಿಕ ಚಿತ್ರ )
ಚೀನಾ ಮಿಲಿಟರಿ ಪಡೆ (ಸಾಂದರ್ಭಿಕ ಚಿತ್ರ )    

ಬೀಜಿಂಗ್‌: ಚೀನಾ ತನ್ನ ರಕ್ಷಣಾ ಬಜೆಟ್‌ನ ಮೊತ್ತವನ್ನು ಸತತ ಎಂಟನೇ ವರ್ಷವೂ ಹೆಚ್ಚಿಸಿದೆ. ಮಿಲಿಟರಿಗಾಗಿ 1.55 ಟ್ರಿಲಿಯನ್ ಯುವಾನ್‌ (224 ಶತಕೋಟಿ ಡಾಲರ್‌ - ₹18.30 ಲಕ್ಷ ಕೋಟಿ) ಅನ್ನು ಒದಗಿಸಲಾಗಿದ್ದು, ಇದು ಕಳೆದ ಬಾರಿಗಿಂತಲೂ ಶೇಕಡಾ 7.2 ರಷ್ಟು ಅಧಿಕ.

ಚೀನಾ ಕಳೆದ ವರ್ಷ ತನ್ನ ರಕ್ಷಣಾ ಬಜೆಟ್‌ಗಾಗಿ 1.45 ಟ್ರಿಲಿಯನ್ ಯುವಾನ್‌ ಅನ್ನು ನಿಗದಿಪಡಿಸಿತ್ತು. ಆ ವರ್ಷವೂ ಬಜೆಟ್‌ನಲ್ಲಿ ಶೇ. 7.1ರಷ್ಟು ಹೆಚ್ಚಳವಾಗಿತ್ತು. ಈ ವರ್ಷ ರಕ್ಷಣಾ ವೆಚ್ಚವನ್ನು 1.55 ಟ್ರಿಲಿಯನ್ ಯುವಾನ್‌ಗೆ ಏರಿಸಲಾಗಿದೆ.

ಅಮೆರಿಕನ್‌ ಡಾಲರ್ ಮೌಲ್ಯದ ದೃಷ್ಟಿಯಿಂದ ನೋಡುವುದಾದರೆ, ಚೀನಾದ ಈ ವರ್ಷದ ರಕ್ಷಣಾ ವೆಚ್ಚವು ಕಳೆದ ವರ್ಷಕ್ಕಿಂತಲೂ ಕಡಿಮೆ. ಕಳೆದ ಬಾರಿ 230 ಶತಕೋಟಿ ಡಾಲರ್‌ ಇದ್ದ ರಕ್ಷಣಾ ಬಜೆಟ್‌ ಈ ಬಾರಿ 224 ಶತಕೋಟಿ ಡಾಲರ್‌ಗೆ ಇಳಿದಿದೆ.

ADVERTISEMENT

ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಚೀನಾದ ರಕ್ಷಣಾ ಬಜೆಟ್ ಭಾರತದ ರಕ್ಷಣಾ ಅನುದಾನಕ್ಕಿಂತಲೂ ಮೂರು ಪಟ್ಟು ಅಧಿಕವೆನಿಸಿಕೊಂಡಿದೆ. 2023-24ರ ಭಾರತದ ರಕ್ಷಣಾ ಬಜೆಟ್ ₹5.94 ಲಕ್ಷ ಕೋಟಿ (72.6 ಶತಕೋಟಿ ಡಾಲರ್‌) ಆಗಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.