ADVERTISEMENT

ಚೀನಾದಲ್ಲಿ ಕೋವಿಡ್ ಹೆಚ್ಚಳ:‌‌‌ ಐಫೋನ್ ಫ್ಯಾಕ್ಟರಿ ಸುತ್ತಮುತ್ತ ಲಾಕ್‌ಡೌನ್

ಏಜೆನ್ಸೀಸ್
Published 2 ನವೆಂಬರ್ 2022, 14:36 IST
Last Updated 2 ನವೆಂಬರ್ 2022, 14:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್:ವಿಶ್ವದ ಅತಿದೊಡ್ಡ ಐಫೋನ್ ಫ್ಯಾಕ್ಟರಿಯ ಸುತ್ತಮುತ್ತಲ ಪ್ರದೇಶದ 6 ಲಕ್ಷ ಜನರ ಮೇಲೆಚೀನಾದ ಅಧಿಕಾರಿಗಳು ಬುಧವಾರ ಲಾಕ್‌ಡೌನ್ ವಿಧಿಸಿದ್ದಾರೆ.

ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಸ್ವಯಂಸೇವಕರು, ‘ಕೋವಿಡ್ ಪರೀಕ್ಷೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯುವವರನ್ನು ಹೊರತುಪಡಿಸಿ ಉಳಿದವರು ತಮ್ಮ ನಿವಾಸಗಳಿಂದ ಹೊರಬರಬಾರದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಝೆಂಗ್‌ಝೌ ಘಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಫಾಕ್ಸ್‌ಕಾನ್‌ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.