ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 4.8 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ (₹ 39,396 ಕೋಟಿ) 1,200 ಮೆಗಾವಾಟ್ ಸಾಮರ್ಥ್ಯದ ಪರಮಾಣು ವಿದ್ಯುತ್ ಸ್ಥಾವರ ಆರಂಭಿಸುವ ಒಪ್ಪಂದಕ್ಕೆ ಚೀನಾ ಮಂಗಳವಾರ ಸಹಿ ಹಾಕಿದೆ.
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚೀನಾ ಹೂಡಿಕೆ ಮಾಡುತ್ತಿರುವ ಪ್ರಕ್ರಿಯೆಯು ಉಭಯ ರಾಷ್ಟ್ರಗಳ ಕಾರ್ಯತಂತ್ರ ಸಹಕಾರವನ್ನು ಹೆಚ್ಚಿಸುವ ಸಂಕೇತವಾಗಿದೆ.
ಒಪ್ಪಂದಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಾಕ್ಷಿಯಾದರು. ‘ಚಷ್ಮಾ–ವಿ’ ಪರಮಾಣು ವಿದ್ಯುತ್ ಸ್ಥಾವರವು ಪಂಜಾಬ್‌ನ ಮಿಯಾನ್‌ವಾಲಿ ಜಿಲ್ಲೆಯ ಚಷ್ಮಾದಲ್ಲಿ ನಿರ್ಮಾಣವಾಗಲಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಶೆಹಬಾಜ್, ‘ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯ ಒಪ್ಪಂದವು ಪಾಕಿಸ್ತಾನ ಹಾಗೂ ಚೀನಾದ ನಡುವಿನ ಆರ್ಥಿಕ ಸಹಕಾರದ ಹೆಚ್ಚಳವನ್ನು ಸೂಚಿಸುತ್ತದೆ. ಈ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು’ ಎಂದರು.
ಇದೇ ವೇಳೆ ಪರಮಾಣು ವಿದ್ಯುತ್ ಸ್ಥಾವರದ ಯೋಜನೆಯನ್ನು ಜಾರಿಗೆ ತರಲು ವಿಳಂಬ ಮಾಡಿದ ಕಾರಣಕ್ಕಾಗಿ ಹಿಂದಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರು.
‘ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಚೀನಾ ಈ ಹೂಡಿಕೆ ಮಾಡುತ್ತಿದೆ. ಈ ನಡೆಯು, ಪಾಕಿಸ್ತಾನವು ಚೀನಾದ ಕಂಪನಿಗಳು ಹಾಗೂ ಹೂಡಿಕೆದಾರರು ನಂಬಿಕೆ ಹಾಗೂ ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಶೆಹಬಾಜ್ ಹೇಳಿದರು.
ಪಾಕಿಸ್ತಾನಕ್ಕೆ ಸಹಾಯ ಹಸ್ತ ನೀಡಿದ್ದಕ್ಕಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ಚೀನಾ ನಾಯಕತ್ವದ ಉದಾರತೆಗೆ ನಾವು ಬದ್ಧರಾಗಿದ್ದೇವೆ. –ಶೆಹಬಾಜ್ ಷರೀಫ್ ಪಾಕಿಸ್ತಾನ ಪ್ರಧಾನಿ–ಶೆಹಬಾಜ್ ಷರೀಫ್ ಪಾಕಿಸ್ತಾನ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.