ಬೀಜಿಂಗ್: ಅಂತರಿಕ್ಷ ಕಕ್ಷೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸುವು ದರ ಭಾಗವಾಗಿ ಅಂತಿಮ ಹಂತದ ಪರಿಕರಗಳನ್ನು ಹೊತ್ತ ಮೆಂಗ್‌ಟಿಯಾನ್ ಅನ್ನು ತನ್ನ ಶಾಶ್ವತ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸುವಲ್ಲಿಚೀನಾ ಯಶಸ್ವಿಯಾಯಿತು.
ಮೆಂಗ್‌ಟಿಯಾನ್ ಎಂದು ಹೆಸರಿಸಲಾದ ಅಂತಿಮ ಹಂತದ ಪರಿಕರಗಳಿದ್ದ ವಾಹಕವು ಟಿಯಾಂಗಾಂಗ್ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿದೆ ಎಂದು ಸರ್ಕಾರದ ಅಧಿಕೃತ ವಾಹಿನಿ ಸಿಸಿಟಿವಿ ವರದಿ ಮಾಡಿದೆ.
ವೆನ್‌ಚಾಂಗ್ ಉಡಾವಣಾ ಕೇಂದ್ರ ದಿಂದ ಸೋಮವಾರ ಮೆಂಗ್‌ಟಿಯಾನ್ ಉಡಾವಣೆ ಮಾಡಲಾಗಿತ್ತು. ಇದು, ಅಂತಿಮ ಗುರಿಯನ್ನು ತಲುಪಲು 13 ಗಂಟೆಯನ್ನು ತೆಗೆದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.