ADVERTISEMENT

ಭಾರತಕ್ಕೆ ಚೀನಾ ವಿಮಾನಯಾನ–ಇನ್ನೂ ನಿರ್ಧಾರ ಇಲ್ಲ

ಪಿಟಿಐ
Published 5 ಜುಲೈ 2022, 13:25 IST
Last Updated 5 ಜುಲೈ 2022, 13:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್: ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ನಿರ್ಬಂಧಿಸಲಾಗಿದ್ದ ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಚೀನಾ ಮತ್ತೆ ಅನುಮತಿ ನೀಡಲು ಪ‍್ರಾರಂಭಿಸಿದೆ. ಆದರೆ ಭಾರತಕ್ಕೆ ವಿಮಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಅದು ಇನ್ನೂ ನಿರ್ಧಾರ ಪ್ರಕಟಿಸಿಲ್ಲ.

ಭಾರತೀಯ ವೃತ್ತಿಪರರಿಗೆ ಹಾಗೂ ಕುಟುಂಬಗಳಿಗೆ ಇದ್ದ ವೀಸಾ ನಿಷೇಧವನ್ನು ಕಳೆದ ತಿಂಗಳು ತೆಗೆದು ಹಾಕಲಾಗಿತ್ತು. ಆದರೆ ಚೀನಾಕ್ಕೆ ನೇರ ವಿಮಾನ ಸಂಚಾರ ಇಲ್ಲದ ಕಾರಣ ಅಲ್ಲಿಗೆ ತೆರಳಲು ಸಾಧ್ಯವಿಲ್ಲದಂತಾಗಿದೆ. ಮತ್ತೊಂದು ದೇಶದ ಮೂಲಕ ಚೀನಾಗೆ ಪ್ರಯಾಣ ಮಾಡುವುದೂ ಸಹ ತುಂಬಾ ದುಬಾರಿಯ ಸಂಗತಿಯಾಗಿದೆ.

ಈ ಮಧ್ಯೆ ಭಾರತ–ಚೀನಾ ನಡುವೆ ಸೀಮಿತ ವಿಮಾನಗಳನ್ನು ಪುನರಾರಂಭಿಸಲು ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.