ನವದೆಹಲಿ:ಚೀನಾದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಕ್ಷಿಪ್ರ ಕ್ರಾಂತಿ ನಡೆಸಿ, ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಪದಚ್ಯುತಗೊಳಿಸಿ ಗೃಹ ಬಂಧನದಲ್ಲಿರಿಸಿದೆ ಎನ್ನಲಾಗಿದೆ.ಸೇನಾ ಮುಖ್ಯಸ್ಥ ಜನರಲ್ ಲಿ ಕ್ವಿಯೋಮಿಂಗ್ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎನ್ನುವ ವದಂತಿಗಳುಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಭ್ರಷ್ಟಾಚಾರ ಸಂಬಂಧ ಇಬ್ಬರು ಮಾಜಿ ಸಚಿವರಿಗೆ ಮರಣದಂಡನೆ ವಿಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ದೇಶದಲ್ಲಿ ಏಕಾಏಕಿ 9 ಸಾವಿರ ವಿಮಾನಗಳ ಹಾರಾಟ ರದ್ದು, 80 ಕಿ.ಮೀ.ಉದ್ದಕ್ಕೂ ಕಾಣಿಸಿದ ಸೇನಾ ವಾಹನಗಳ ಸಂಚಾರ ಸೇನಾ ಕ್ರಾಂತಿ ವದಂತಿಗೆ ಪುಷ್ಟಿ ನೀಡಿದೆ. ಭಾನುವಾರ ಸಹ ವಾಣಿಜ್ಯ ವಿಮಾನಗಳು ಹಾರಾಟ ನಡೆಸಿಲ್ಲವೆಂದು ಟ್ವಿಟರ್‌ನಲ್ಲಿ ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ.ಆದರೆ, ಚೀನಾ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಅಥವಾ ಸರ್ಕಾರಿ ಮಾಧ್ಯಮಗಳು ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಈ ಮಧ್ಯೆ,ಅ. 16ರಂದು ಆರಂಭವಾಗುವ ಮಹತ್ವದ ರಾಜಕೀಯ ಸಭೆಗೆ ಪ್ರತಿನಿಧಿಗಳನ್ನು ಸಿಸಿಪಿ ಆಯ್ಕೆಮಾಡಿದೆ. ಷಿ ಜಿನ್‌ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಬೀಜಿಂಗ್‌ನಿಂದ ಅಧಿಕೃತ ಮಾಧ್ಯಮಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.