ADVERTISEMENT

ಶಾಂಘೈ ಸಹಕಾರ ಸಂಘದ ಸಮಾವೇಶದಲ್ಲಿ ಷಿ ಜಿನ್‌ಪಿಂಗ್ ಭಾಗಿ: ಚೀನಾ ವಿದೇಶಾಂಗ ಸಚಿವಾಲಯ

ರಾಯಿಟರ್ಸ್
Published 30 ಜೂನ್ 2023, 5:55 IST
Last Updated 30 ಜೂನ್ 2023, 5:55 IST
ಷಿ ಜಿನ್‌ಪಿಂಗ್
ಷಿ ಜಿನ್‌ಪಿಂಗ್   

ಬೀಜಿಂಗ್‌: ಜುಲೈ 4ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ಎಸ್‌ಸಿಒ ಸಮಾವೇಶವು ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಸ್‌ಸಿಒ ಸದಸ್ಯ ರಾಷ್ಟ್ರಗಳ ರಕ್ಷಣೆ ಮತ್ತು ವಿದೇಶಾಂಗ ಸಚಿವರುಗಳು ಈ ವರ್ಷ ಭಾರತಕ್ಕೆ ಭೇಟಿ ನೀಡಿ ಸಭೆಗಳಲ್ಲಿ ಭಾಗವಹಿಸಿದ್ದರು.

ADVERTISEMENT

ಈ ಪ್ರದೇಶದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಪ್ರತಿಯಾಗಿ ಎಸ್‌ಸಿಒ 2001ರಲ್ಲಿ ರಚನೆಯಾಗಿದೆ. ಭಾರತ, ಚೀನಾ, ಪಾಕಿಸ್ತಾನ, ರಷ್ಯಾ, ಕಜಕಸ್ತಾನ, ತಜಿಕಿಸ್ತಾನ, ಉರ್ಬೆಕಿಸ್ತಾನ, ಕಿರ್ಗಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ.

ಜುಲೈ ಶೃಂಗಸಭೆಯ ಬಳಿಕ ಕಜಕಸ್ತಾನ ಎಸ್‌ಸಿಒ ಅಧ್ಯಕ್ಷತೆ ವಹಿಸಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.