ಹನೋಯಿ: ವಿಯೆಟ್ನಾಂ ರಾಜಧಾನಿ ಹನೋಯಿಯಿಂದ ಚೀನಾದ ಗುವಾಂಗ್‌ಕ್ಸಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಮೇಲ್ದರ್ಜೆಗೇರಿಸುವುದೂ ಸೇರಿದಂತೆ, ಉಭಯ ದೇಶಗಳ ನಡುವೆ ಸಂಪರ್ಕ ಸಾಧಿಸುವ ಇತರರ ಯೋಜನೆಗಳಿಗೆ ಅನುದಾನ ನೀಡಲು ಚೀನಾ ಸಿದ್ಧವಿದೆ ಎಂದು ವಿಯೆಟ್ನಾಂನಲ್ಲಿರುವ ಚೀನಾದ ರಾಯಭಾರಿ ಹೇಳಿದ್ದಾರೆ.
'ಉಭಯ ದೇಶಗಳು ಭೂ, ಸಾಗರ, ವಾಯು ಮತ್ತು ಅಂತರ್ಜಾಲ ಸಂಪರ್ಕವನ್ನು ಪರಸ್ಪರ ಉತ್ತಮಪಡಿಸಿಕೊಳ್ಳಬೇಕಿದೆ' ಎಂದು ರಾಯಭಾರಿ ಕ್ಸಿಯಾಂಗ್ ಬೊ ಹೇಳಿರುವುದಾಗಿ ವಿಯೆಟ್ನಾಂ ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಂಗಳವಾರ ಹನೋಯಿಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಕ್ಸಿಯಾಂಗ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.