ADVERTISEMENT

ಮ್ಯಾನ್ಮಾರ್‌ ಸೇನೆ, ಬಂಡುಕೋರರಿಂದ ಕದನ ವಿರಾಮಕ್ಕೆ ಒಪ್ಪಿಗೆ: ಚೀನಾ

ಏಜೆನ್ಸೀಸ್
Published 12 ಜನವರಿ 2024, 13:14 IST
Last Updated 12 ಜನವರಿ 2024, 13:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀಜಿಂಗ್‌: ಮ್ಯಾನ್ಮಾರ್‌ ಸೇನೆ ಮತ್ತು ಬಂಡುಕೋರ ಗುಂಪುಗಳು ಹೋರಾಟ ನಿಲ್ಲಿಸಿ ತಕ್ಷಣ ಕದನ ವಿರಾಮ ಘೋಷಿಸಲು ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್‌ ಶುಕ್ರವಾರ ಹೇಳಿದ್ದಾರೆ.

ಯುನಾನ್‌ ಪ್ರಾಂತ್ಯದ ಕುನ್ಮಿಂಗ್‌ನಲ್ಲಿ ಬುಧವಾರ ಮತ್ತು ಗುರುವಾರ ಚೀನಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಯಾವ ಪ್ರದೇಶದಲ್ಲಿ ಕದನ ವಿರಾಮ ಘೋಷಿಸಲಾಗಿದೆ ಎಂಬುದನ್ನು ಮಾವೊ ಅವರು ಬಹಿರಂಗಪಡಿಸಿಲ್ಲ.

ಉತ್ತರ ಮ್ಯಾನ್ಮಾರ್‌ನ ಪ್ರಮುಖ ನಗರವಾದ ಲೌಕಾಯಿಯನ್ನು ವಶಪಡಿಸಿಕೊಂಡಿರುವುದಾಗಿ ಮ್ಯಾನ್ಮಾರ್‌ನ ಬಂಡುಕೋರ ಗುಂಪುಗಳಾದ ನ್ಯಾಷನಲ್‌ ಡೆಮಾಕ್ರೆಟಿಕ್‌ ಅಲಯನ್ಸ್‌ ಆರ್ಮಿ (ಎಂಎನ್‌ಡಿಎಎ), ದಿ ಅರಾಕನ್‌ ಆರ್ಮಿ (ಎ.ಎ) ಮತ್ತು ದಿ ತಾಂಗ್‌ ನ್ಯಾಷನಲ್‌ ಲಿಬರೇಷನ್‌ ಆರ್ಮಿ (ಟಿಎನ್‌ಎಲ್‌ಎ) ಈಚೆಗೆ ಹೇಳಿತ್ತು.

2021ರಲ್ಲಿ ಕ್ಷಿಪ್ರ ದಂಗೆಯ ಮೂಲಕ ಅಧಿಕಾರ ಪಡೆದಿದ್ದ ಸೇನಾಡಳಿತಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಿತ್ತು.

ಲೌಕಾಯಿ ನಗರದಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ಹೋರಾಟ ತೀವ್ರಗೊಂಡಿದ್ದ ಕಾರಣ ಅಲ್ಲಿನ ಜನರು ಬೇರೆಡೆಗೆ ಪಲಾಯನ ಮಾಡಿದ್ದಾರೆ.

ಮ್ಯಾನ್ಮಾರ್‌ ಗಡಿ ಸಮೀಪ ಈಚೆಗೆ ಶೆಲ್‌ ದಾಳಿಗೆ ಚೀನಾದ ಪ್ರಜೆಗಳು ಗಾಯಗೊಂಡಿದ್ದರು. ಇದಕ್ಕೆ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಮ್ಯಾನ್ಮಾರ್‌ನಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ಅಕ್ಟೋಬರ್‌ನಿಂದ ಶಸ್ತ್ರಸಜ್ಜಿತ ಹೋರಾಟ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.