ವಾಷಿಂಗ್ಟನ್: ಪಾಕಿಸ್ತಾನ ಮಾಧ್ಯಮಗಳ ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಣ ಸಾಧಿಸಲು ಮತ್ತು ತನಗೆ ಅನುಕೂಲವಾಗುವ ರೀತಿಯಲ್ಲಿ ಮಾಧ್ಯಮಗಳು ಸುದ್ದಿ ಬಿತ್ತರಿಸುವಂತೆ ಮಾಡಲು ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಜಾಲವೊಂದನ್ನು ಚೀನಾ ಅಭಿವೃದ್ಧಿಪಡಿಸಿದೆ ಎಂದು ಅಮೆರಿಕದ ವರದಿಯೊಂದು ತಿಳಿಸಿದೆ.
ಮಾಹಿತಿ ಕ್ಷೇತ್ರದಲ್ಲಿ ರಷ್ಯಾದ ಜೊತೆಗೆ ನಿಕಟವಾಗಿ ಕಾರ್ಯ ನಿರ್ವಹಿಸಲು ತನ್ನ ಪಾಲುದಾರ ರಾಷ್ಟ್ರಗಳನ್ನು ಈ ಪಟ್ಟಿಗೆ ಸೇರಿಸಿಕೊಂಡಿತ್ತು. ಈ ಮೂಲಕ ತನಗೆ ಪ್ರತಿಕೂಲವಾಗಿರುವ ಮಾಹಿತಿಗಳನ್ನು ಎದುರಿಸಲು ಮುಂದಾಗಿತ್ತು. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಮಾಧ್ಯಮ ಫೋರಂ ಅಡಿ ತಪ್ಪು ಮಾಹಿತಿಯನ್ನು ತೊಡೆದು ಹಾಕುವ ಮೂಲಕ ಪಾಕಿಸ್ತಾನದ ಜೊತೆಗೆ ಗಾಢವಾದ ಸಹಕಾರಕ್ಕೆ ಚೀನಾ ಯತ್ನಿಸುತ್ತಿದೆ ಎಂದು ವರದಿ ಹೇಳಿದೆ.
ಕಳೆದ ವಾರವಷ್ಟೇ ಅಮೆರಿಕ ಈ ವರದಿ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.