ಬೀಜಿಂಗ್/ಜಿಯುಕ್ವಾನ್: ‘ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕಾರ್ಯವನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಗಗನಯಾತ್ರಿಗಳನ್ನು ಹೊತ್ತ ಗಗನನೌಕೆಯನ್ನು ಭಾನುವಾರ ಉಡಾವಣೆ ಮಾಡಲಾಗುವುದು’ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ಶನಿವಾರ ಪ್ರಕಟಿಸಿದೆ.
ಗಗನಯಾತ್ರಿಗಳಾದ ಚೆನ್ ಡಾಂಗ್, ಲಿಯು ಯಾಂಗ್ ಮತ್ತು ಕೈ ಕ್ಸುಝೆ ಅವರನ್ನು ಹೊತ್ತ ಶೆಂಝೌ- 14 ಬಾಹ್ಯಾಕಾಶ ನೌಕೆಯು ವಾಯವ್ಯ ಪ್ರಾಂತ್ಯದ ಗನ್ಸುನಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದೆ.
ಈ ಗಗನಯಾನಿಗಳ ತಂಡ, ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಿದೆ. ಈ ಕಾರ್ಯವು ಪೂರ್ಣಗೊಂಡರೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಏಕೈಕ ರಾಷ್ಟ್ರ ಚೀನಾ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.