ADVERTISEMENT

ಹಾಂಗ್‌ಕಾಂಗ್‌ನೊಂದಿಗಿನ ಗಡಿಯನ್ನು ಪುನಃ ತೆರೆಯಲಿರುವ ಚೀನಾ

ರಾಯಿಟರ್ಸ್
Published 5 ಜನವರಿ 2023, 6:34 IST
Last Updated 5 ಜನವರಿ 2023, 6:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಂಗ್‌ಕಾಂಗ್: ತನ್ನ ವಿಶೇಷ ಆಡಳಿತ ಪ್ರದೇಶವಾದ ಹಾಂಗ್‌ಕಾಂಗ್‌ನೊಂದಿಗಿನ ಗಡಿಯನ್ನು ಪುನಃ ತೆರೆಯಲಾಗುವುದು ಎಂದು ಚೀನಾ ಹೇಳಿದೆ.

ಬೀಜಿಂಗ್ ನಗರವು ಸೇರಿದಂತೆ ಚೀನಾದ ಬಹುತೇಕ ನಗರಗಳು ಕೋವಿಡ್–19ರ ಲಾಕ್‌ಡೌನ್‌ನಿಂದ ಭಾರೀ ನಷ್ಟ ಅನುಭವಿಸಿದ್ದವು. ಮೂರು ವರ್ಷಗಳ ಬಳಿಕ ಕೋವಿಡ್ ತಡೆ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಅಲ್ಲಿನ ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಜನವರಿ 8 ರಿಂದ ಹಾಂಗ್‌ಕಾಂಗ್‌ ಜೊತೆಗಿನ ವಾಣಿಜ್ಯ ಚಟುವಟಿಕೆಗಳನ್ನು ಮರು ಪ್ರಾರಂಭಿಸಲಾಗುತ್ತಿದೆ.

ADVERTISEMENT

ವಿದೇಶಿ ಪ್ರಯಾಣಕ್ಕೆ ಕೊವೀಡ್ –19ರ ದಿಗ್ಭಂಧನವನ್ನು ಹೇರಲಾಗುವುದಿಲ್ಲ. ಮುಕ್ತ ಪ್ರಯಾಣಕ್ಕೆ ಅವಕಾಶವಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.