ಬೀಜಿಂಗ್: ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವದ ಸಂದರ್ಭದಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಪಕ್ಷದ ನಿಷ್ಠಾವಂತ ಸದಸ್ಯರಿಗೆ ಪದಕಗಳನ್ನು ನೀಡಿ ಗೌರವಿಸಿದರು. ಅಲ್ಲದೆ ಎಲ್ಲರಿಗೂ ಮಾರ್ಕ್ಸ್‌ವಾದವನ್ನು ಪಾಲಿಸುವಂತೆ ಕರೆ ನೀಡಿದರು.
ಈ ಸಂಬಂಧ ಸೋಮವಾರ ರಾತ್ರಿ ಬೀಜಿಂಗ್‌ನ ಒಲಿಂಪಿಕ್ ಸ್ಟೇಡಿಯಂನಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು,‘ 40 ವರ್ಷಗಳಿಂದ ಕೈಗೊಂಡ ಸುಧಾರಣೆಗಳಿಂದಾಗಿ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಪ್ರಗತಿ ಸಾಧ್ಯವಾಯಿತು’ ಎಂದರು.
‘ಪಕ್ಷದ ಎಲ್ಲಾ ಸದಸ್ಯರುಗಳು ಮಾರ್ಕ್ಸ್‌ವಾದ ಮತ್ತು ಸಮಾಜವಾದವನ್ನು ತಮ್ಮ ಜೀವನದ ಗುರಿಯಾಗಿ ಸ್ವೀಕರಿಸಬೇಕು’ ಎಂದು ಕರೆ ನೀಡಿದರು. ಈ ಶತಮಾನೋತ್ಸವ ಕಾರ್ಯಕ್ರಮವು ಗುರುವಾರ ಅಂತ್ಯಗೊಳ್ಳಲಿದೆ.
ಕಳೆದ 9 ವರ್ಷಗಳಿಂದ ಷಿ ಜಿನ್‌ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.